ಜ್ಯೂನಿಯರ್ ವಿದ್ಯಾರ್ಥಿಗೆ ಹಲ್ಲೆ: 15 ಮಂದಿ ವಿರುದ್ಧ ಕೇಸು
ಕಾಸರಗೋಡು: ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಸೀನಿಯರ್ ವಿದ್ಯಾರ್ಥಿಗಳ ತಂಡವೊಂದು ಜ್ಯೂನಿಯರ್ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಬಗ್ಗೆ ದೂರು ಉಂಟಾಗಿದೆ. ಈ ಘರ್ಷಣೆಯಲ್ಲಿ ಪ್ರಥಮ ವರ್ಷ ಪದವಿಯ ವಿದ್ಯಾರ್ಥಿ ಮಲಪ್ಪುರಂ ತಳ್ಳಿಪ್ಪಾಡಿ ಪುರಂಙ ಒಲಂಗಾಟ್ ವೀಟಿಲ್‌ನ ಒ.ಎಂ. ಸಾಹಿದ್ (19) ಗಾಯ ಗೊಂಡಿದ್ದು, ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆತ ನೀಡಿದ ದೂರಿನಂತೆ ಇದೇ ಕಾಲೇಜಿನ ಸೀನಿಯರ್ ವಿದ್ಯಾರ್ಥಿಗಳಾದ ಸವಾದ್, ಗಸ್ವಾನ್, ಸುನೈಬ್, ಅಲಿ, ಅಜ್ಮಲ್ ಸೇರಿದಂತೆ ಒಟ್ಟು 15 ಮಂದಿಯ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ನಿನ್ನೆ ಬೆಳಿಗ್ಗೆ ಕಾಲೇಜಿನ ಆವರಣದೊಳಗೆ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಸಾಹಿದ್ ಆರೋಪಿಸಿದ್ದಾನೆ.