ಲಿಟ್ಲ್ ಲಿಲ್ಲಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಕುಂಬಳೆ: ಕೇರಳ ಸಯನ್ಸ್ ಅಕಾಡೆಮಿ ಆಶ್ರಯದಲ್ಲಿ ಕೃತಕ ಬುದ್ದಿಮತ್ತೆ ಮತ್ತು ಭೂ ವಿಜ್ಞಾನ ಬಗ್ಗೆ ನಾಯ್ಕಾಪು ಲಿಟ್ಲ್ ಲಿಲ್ಲಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ  ತರಗತಿ ನಡೆಸಲಾಯಿತು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಚೆಯರ್ ಪರ್ಸನ್ ಸರಸ್ವತಿ ಎ. ಉದ್ಘಾಟಿಸಿದರು. ಸೆಂಟ್ರಲ್ ಯೂನಿ ವರ್ಸಿಟಿಯ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಜಾಸ್ಮಿನ್ ಎಂ. ಶಾ ಅಧ್ಯಕ್ಷತೆ ವಹಿಸಿದರು. ಶಾಲೆಯ ಪ್ರಾಂಶುಪಾಲ ಚಂದ್ರ ಬೋಸ್ ಎಂ.ಜಿ. ಸ್ವಾಗತಿಸಿದರು. ಪ್ರೊಫೆಸರ್ ಸಿಜಿನ್ ಕುಮಾರ್ ಎ.ವಿ, ಡಾ. ಆದಿತ್ಯ ವಿ. ತರಗತಿ ನಡೆಸಿದರು. ಕಾರ್ಯಕ್ರಮವು ವೈಜ್ಞಾನಿಕ ಒಳನೋಟ ಗಳನ್ನು ಮಕ್ಕಳಿಗೆ ಒದಗಿಸಿದ್ದು, ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಆಸಕ್ತಿ ಬೆಳೆಸಲು ಪ್ರೇರಣೆ ನೀಡಿತು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

RELATED NEWS

You cannot copy contents of this page