ಟ್ಯಾಪಿಂಗ್ ಕಾರ್ಮಿಕ ನ್ಯೂಮೋನಿಯಾ ಬಾಧಿಸಿ ಮೃತ್ಯು
ಮುಳ್ಳೇರಿಯ: ನ್ಯೂಮೋನಿಯ ಬಾಧಿಸಿ ಟ್ಯಾಪಿಂಗ್ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಅಡೂರು ಮಲ್ಲಂಪಾರೆ ಕುಂಬಕ್ಕೋಡ್‌ನ ದಿ| ನಾರಾಯಣ ನಾಯ್ಕ್‌ರ ಪುತ್ರ ರಾಧಾಕೃಷ್ಣ (31) ಮೃತಪಟ್ಟ ವ್ಯಕ್ತಿ. ನಿನ್ನೆ ತೀವ್ರ ಜ್ವರ ಅನುಭವ ಗೊಂಡ ಹಿನ್ನೆಲೆಯಲ್ಲಿ ರಾಧಾಕೃ ಷ್ಣರನ್ನು ಬಂದಡ್ಕದ ಖಾಸಗಿ ಆಸ್ಪತ್ರೆಗೆ ತಲುಪಿ ಸಲಾಗಿತ್ತು. ಈ ವೇಳೆ ಸ್ಥಿತಿ ಗಂಭೀರವಾಗಿದ್ದು, ಇದರಿಂದ ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ಯು ವಂತೆ ವೈದ್ಯರು ತಿಳಿಸಿದ್ದು, ಇದರಂತೆ ಜಿಲ್ಲಾಸ್ಪತ್ರೆಗೆ ಕರೆದೊಯ್ದರೂ ಜೀವ ರಕ್ಷಿಸಲಾಗಲಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಸ್ವಗೃಹಕ್ಕೆ ಕೊಂಡೊ ಯ್ದು ಮನೆ ಹಿತ್ತಿಲಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಆದೂರು ಪೊಲೀ ಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ತಾಯಿ ಸರೋಜಿನಿ, ಸಹೋದರ-ಸಹೋದರಿಯರಾದ ಎಂ.ಕೆ. ಚಂದ್ರನ್, ಜಯಂತಿ, ಚಂ ದ್ರಾವತಿ, ಶಾರದ, ಶಾಂತ ಕುಮಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.