ಡಾಲರ್ ಎದುರು ರೂಪಾಯಿ ಮೌಲ್ಯ ಐತಿಹಾಸಿಕ ಕುಸಿತ

ನವದೆಹಲಿ: ಅಮೆರಿಕದ ಡಾಲರ್ ವಿರುದ್ಧ ಐತಿಹಾಸಿಕ ಕುಸಿತದೊಂದಿಗೆ ಭಾರತೀಯ ರೂಪಾಯಿ ಹೊಸ ದಾಖಲೆಯನ್ನು ತಲುಪಿದೆ. ಮೊದಲ ಬಾರಿಗೆ ರೂಪಾಯಿ ಮೌಲ್ಯ 87 ರೂ.ಗಳ ಗಡಿ ದಾಟಿದ್ದು, ಇದು ಕರೆನ್ಸಿ ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.ಅಮೆರಿಕವು ಸುಂಕಗಳನ್ನು ಹೆಚ್ಚಿಸುವ ಸಾಧ್ಯತೆಯ ಭಯದ ಮಧ್ಯೆ ಈ ಕುಸಿತ ಕಂಡು ಬಂದಿದ್ದು, ಇದು ರೂಪಾಯಿ ಮೌಲ್ಯದ ಮೇಲೆ ಮತ್ತಷ್ಟು ಒತ್ತಡ ಹೇರಿದೆ.

ಭಾರತದಲ್ಲಿ ವಹಿವಾಟಿನ ಆರಂಭದಲ್ಲಿ ಡಾಲರ್ ಎದುರು ರೂಪಾಯಿ 87.06 ಕ್ಕೆ ಪ್ರಾರಂಭವಾಯಿತು. 45 ಪೈಸೆ ಕುಸಿತ ಕಂಡಿದ್ದು, ಮಾರುಕಟ್ಟೆ ಆರಂಭವಾದ ಬಳಿಕ ರೂಪಾಯಿ ಮೌಲ್ಯ ಇನ್ನಷ್ಟು ದುರ್ಬಲಗೊಂಡು ಕೇವಲ 10 ನಿಮಿಷಗಳಲ್ಲಿ ಪ್ರತೀ ಡಾಲರ್‌ಗೆ ೫೫ ಪೈಸೆ ಕುಸಿದು 87.12  ರೂ.ಗೆ ತಲುಪಿದೆ. ಈ ಕುಸಿತವು ಭಾರತೀಯ ಕರೆನ್ಸಿಗೆ ಅಭೂತಪೂರ್ವವಾಗಿದ್ದು, ಇದು ಮಾರುಕಟ್ಟೆಗಳಲ್ಲಿ ಆತಂಕದ ಸಂಚಲನ ಮೂಡಿಸಿದೆ.

You cannot copy contents of this page