ತೃಶೂರಿನಲ್ಲಿ ಗೂಂಡಾಗಳ ಅಟ್ಟಹಾಸ ಇಬ್ಬರ ಕಗ್ಗೊಲೆ, ಓರ್ವನಿಗೆ ಗಂಭೀರ
ತೃಶೂರು: ತೃಶೂರಿನ ಎರಡೆಡೆಗಳಲ್ಲಿ ಗೂಂಡಾಗಳು ನಡೆಸಿದ ದಾಳಿಯಲ್ಲಿ ಇಬ್ಬರು ಬರ್ಬರವಾಗಿ ಕೊಲೆಗೈಯ್ಯ ಲ್ಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ತೃಶೂರು ಪುತ್ತೋಳ್ ಬಿಎಸ್‌ಎನ್‌ಎಲ್ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಕರುಣಾಮಯನ್ ಅಲಿಯಾಸ್ ವಿಷ್ಣು (೨೫) ಮತ್ತು ಕುಮ್ಮಟ್ಟಿ ಮುಳಯಂ ನಿವಾಸಿ ಅಖಿಲ್ (೨೮) ಕೊಲೆಗೈಯ್ಯಲ್ಪಟ್ಟ ದುರ್ದೈವಿ ಗಳು. ಕಣಿಮಂಗಲಂ ಮಾಂಕುಳ ಸೇತುವೆ ಬಳಿಯ ರೈಲು ಹಳಿ ಬಳಿ ಇರಿತಕ್ಕೊ ಳಗಾಗಿ ಗಂಭೀರಾವಸ್ಥೆಯಲ್ಲಿದ್ದ ವಿಷ್ಣು ನಿನ್ನೆ ಸಂಜೆ ಪತ್ತೆಯಾಗಿದ್ದಾನೆ. ಅದನ್ನು ಕಂಡವರು ಈತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ, ತುರ್ತು ಚಿಕಿತ್ಸೆ ನೀಡಿ ಕೊಡಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಆತನ ಕುತ್ತಿಗೆ ಮತ್ತು ಎದೆಗೆ ಆಳವಾಗಿ ಇರಿಯಲಾಗಿದೆ. ವಿಷ್ಣುವನ್ನು ಇರಿದ ಬಳಿಕ ಅಕ್ರಮಿಗಳು ಆತನನ್ನು ವಾಹನದಲ್ಲಿ ತಂದು ರೈಲು ಹಳಿ ಬಳಿ ಉಪೇಕ್ಷಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಕೊಲೆ ಗೈಯ್ಯಲ್ಪಟ್ಟ ವಿಷ್ಣು ಹಲವು ಪ್ರಕರಣಗಳ ಆರೋಪಿಯೂ ಆಗಿದ್ದಾನೆ. ಮಾತ್ರವಲ್ಲ ಪೊಲೀಸರು ಕಾಪಾ ಕಾನೂನು ಪ್ರಕಾರ ಈತನ ವಿರುದ್ಧ ಪ್ರಕರಣ ದಾಖಲಿಸಿ ಈ ಹಿಂದೆ ಗಡಿಪಾರು ಮಾಡಿದ್ದರು. ಅಂದಿನಿಂದ ಆತ ಊರು ಬಿಟ್ಟು ಮಂಗಳೂರಿನಲ್ಲಿ ವಾಸಿಸತೊಡಗಿದ್ದನು. ಅಲ್ಲಿಂದ ಎಪ್ರಿಲ್ ೧ರಂದು ಊರಿಗೆ ಹಿಂತಿರುಗಿದ್ದನು. ವಿಷ್ಣುವಿನೊಂದಿಗೆ ನಿಕಟ ಸಂಬಂಧ ಹೊಂದಿರುವ ಗೂಂಡಾ ಗಳೇ ಆತನನ್ನು ಕೊಲೆಗೈದಿರುವುದಾಗಿ ಪೊಲೀಸರು ಶಂಕಿಸುತ್ತಿದ್ದಾರೆ.
ಈ ಘಟನೆ ನಡೆದ ನಂತರ ಸಂಜೆ ೬.೩೦ಕ್ಕೆ ಕುಮ್ಮಾಟ್ಟಿ ಶೋಭಾಯಾತ್ರೆ ವೇಳೆ ಮುರ್ಖಾನಿಕ್ಕೆರೆ ಸರಕಾರಿ ಶಾಲೆ ಬಳಿ ಅಖಿಲ್‌ನನ್ನು ಅಕ್ರಮಿಗಳು ಇರಿದು ಗಂಭೀರ ಗಾಯಗೊಳಿಸಿದ್ದಾರೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಲು ಸಾಧ್ಯವಾಗಲಿಲ್ಲ. ಶೋಭಾಯಾತ್ರೆ ವೇಳೆ ಡ್ಯಾನ್ಸ್ ಮಾಡುವ ವಿಷಯದಲ್ಲಿ ಯುವಕರ ನಡುವೆ ಪರಸ್ಪರ ವಾಗ್ವಾದ ಉಂಟಾಗಿ ಆ ವೇಳೆ ಅವಳಿ ಸಹೋದರರಿಬ್ಬರು ಅಖಿಲ್‌ಗೆ ಇರಿದರೆಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಆ ವೇಳೆ ಇನ್ನೋರ್ವ ಯುವಕನೂ ಇರಿತಕ್ಕೊಳಗಾಗಿ ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ಆರಂಭಿಸಿದ್ದಾರೆ.