ದುರಸ್ತಿ ಕೆಲಸ: ಕಾಸರಗೋಡು- ಹೊಸದುರ್ಗ ರಾಜ್ಯ ಹೆದ್ದಾರಿಯಲ್ಲಿ ನಾಳೆಯಿಂದ ಸಾರಿಗೆ ಸಂಚಾರ ನಿಷೇಧ
ಕಾಸರಗೋಡು: ಕಾಸರಗೋಡು ನಗರದ ಚಂದ್ರಗಿರಿ ಜಂಕ್ಷನ್‌ನಿಂದ ಹೊಸದುರ್ಗ ತನಕದ ರಾಜ್ಯ ಹೆದ್ದಾರಿಯಲ್ಲಿ ಇನಾಳೆಯಿಂದ ಮುಂದಿನ ೧೦ ದಿನಗಳ ತನಕ ಸಾರಿಗೆ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು ಲೋಕೋಪಯೋಗಿ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.
ಚಂದ್ರಗಿರಿ ಸೇತುವೆಯಿಂದ ಆರಂಭಗೊಂಡು ಹೊಸದುರ್ಗದ ತನಕ ಈ ರಾಜ್ಯ ಹೆದ್ದಾರಿಯ ದುರಸ್ತಿ ಕೆಲಸಗಳು ನಾಳೆ ಬೆಳಿಗ್ಗೆಯಿಂದ ಆರಂಭಗೊಳ್ಳಲಿದೆ. ಇದು ಪೂರ್ಣಗೊಳ್ಳಲು ಹತ್ತು ದಿನಗಳು ಬೇಕಾಗಿ ಬರಲಿದೆ. ಆದ್ದರಿಂದ ಅಷ್ಟರ ತನಕ ಈ ರಸ್ತೆಯನ್ನು ನಾಳೆಯಿಂದ ಮುಚ್ಚುಗಡೆಗೊಳಿಸಲಾಗುವುದೆಂದೂ ಇಂಜಿನಿಯರ್ ತಿಳಿಸಿದ್ದಾರೆ.
ಈ ರಸ್ತೆಯಲ್ಲಿ ಸಾಗುವ ಎಲ್ಲಾ ವಾಹನಗಳನ್ನೂ ನಾಳೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಬಿಡಲಾಗುವುದು. ಇನ್ನು ಕಿರು ವಾಹನಗಳಿಗೆ ಟ್ರಾಫಿಕ್ ಪೊಲೀಸರು ಅಗತ್ಯದ ಕ್ರಮೀಕರಣ ಏರ್ಪಡಿಸಿದ್ದಾರೆ.