ದೈವವನ್ನು ಕಂಡು ಓಡಿದ ಬಾಲಕ ಬಿದ್ದು ಗಾಯ: ದೈವಕಲಾವಿದನಿಗೆ ತಂಡದಿಂದ ಹಲ್ಲೆ

ಕಣ್ಣೂರು: ಉತ್ಸವ ವೇಳೆ ಆವೇಷಗೊಂಡ ದೈವವನ್ನು ಕಂಡು ಭಯಗೊಂಡು ಓಡಿದ ಬಾಲಕ ಬಿದ್ದು  ಗಾಯಗೊಂಡಿದ್ದು, ಇದರಿಂದ ರೋಷಗೊಂಡ ತಂಡ ವೊಂದು ದೈವವೇಷ ಧರಿಸಿದ ಕಲಾವಿದನಿಗೆ ಹಲ್ಲೆಗೈದ ಘಟನೆ ಕಣ್ಣೂರು ಬಳಿ ತಿಲ್ಲಂಗೇರಿ ಎಂಬಲ್ಲಿ ನಡೆದಿದೆ. ಪೆರಿಂಗಾನಂ ಉದಯಂಕುನ್ನು ಮಡಪ್ಪುರ ಉತ್ಸವದಂ ಗವಾಗಿ ನಿನ್ನೆ ಸಂಜೆ  ಕೈದ ಚಾಮುಂಡಿ ದೈವಕೋಲ ನಡೆದಿತ್ತು. ಮಡಪ್ಪುರಕ್ಕೆ ಆಗಮಿಸುತ್ತಿ ದ್ದಂತೆ ದೈವ ಆವೇಷಗೊಂಡಿದ್ದು, ಇದರಿಂದ ಹೆದರಿ ಬಾಲಕ ಓಡುತ್ತಿ ದ್ದಾಗ ಬಿದ್ದು ಗಾಯಗೊಂಡಿದ್ದ್ದಾ ನೆನ್ನಲಾಗಿದೆ. ಇದರಿಂದ ರೋಷ ಗೊಂಡ ಒಂದು ತಂಡ ದೈವ ಕಲಾವಿ ದನಿಗೆ ಹಲ್ಲೆಗೈದಿದೆ. ಪೊಲೀಸರು ಹಾಗೂ ಉತ್ಸವ ಸಮಿತಿಯವರು ಸೇರಿ ಪರಿಸ್ಥಿತಿಯನ್ನು ಹತೋಟಿಗೆ ತಂದಿ ದ್ದಾರೆ. ಇದೇ ವೇಳೆ ಘಟನೆ ಬಗ್ಗೆ ದೂ ರು ಲಭಿಸದ ಹಿನ್ನೆಲೆಯಲ್ಲಿ  ಪೊಲೀಸ ರು ಕೇಸು ದಾಖಲಿಸಿಲ್ಲವೆನ್ನಲಾಗಿದೆ.

RELATED NEWS

You cannot copy contents of this page