ನಕಲಿ ಮತದಾನದಿಂದ ಎಲ್‌ಡಿಎಫ್ ಬಚಾವ್ ಆಗದು- ಪಿ.ಕೆ. ಕುಂಞಾಲಿಕುಟ್ಟಿ

ಕಾಸರಗೋಡು: ಚುನಾವಣೆಯಲ್ಲಿ ನಕಲಿ ಮತದಾನ ನಡೆಸಿದಲ್ಲಿ ಈ ಲೋಕಸಭಾ ಚುನಾವಣೆಯಲ್ಲಿ ಎಡರಂಗ ಬಚಾವ್ ಆಗದು ಎಂದು ಮುಸ್ಲಿಂ ಲೀಗ್ ರಾಷ್ಟ್ರೀಯ ಕಾರ್ಯದರ್ಶಿ ಶಾಸಕ ಪಿ.ಕೆ. ಕುಂಞಾಲಿಕುಟ್ಟಿ ಹೇಳಿದ್ದಾರೆ.

ನಕಲಿ ಮತದಾನದ ಬಗ್ಗೆ ಯುಡಿಎಫ್ ಕಾರ್ಯಕರ್ತರು ಜಾಗ್ರತೆ ಪಾಲಿಸಬೇಕು. ಈ ಹಿಂದೆಯೂ ನಕಲಿ ಮತ ಚಲಾಯಿಸಲ್ಪಟ್ಟಿತ್ತು. ಆದ್ದರಿಂದ ಮತದಾನದ ದಿನದಂದು ಹೆಚ್ಚಿನ ಗಮನ ಹರಿಸಿದಲ್ಲಿ ನಕಲಿ ಮತದಾನ ತಡೆಗಟ್ಟ ಬಹುದೆಂದು ಅವರು ಹೇಳಿದ್ದಾರೆ.

ಯುಡಿಎಫ್ ಉಮೇದ್ವಾರ ರಾಜ್ ಮೋಹನ್ ಉಣ್ಣಿತ್ತಾನ್ ಪರ ನಿನ್ನೆ ಅಣಂಗೂರಿನಲ್ಲಿ ನಡೆದ ಯುಡಿಎಫ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗ ವಹಿಸಿ ಅವರು ಮಾತನಾಡುತ್ತಿದ್ದರು.

You cannot copy contents of this page