ನಗರಸಭಾ ಕಚೇರಿಯ ಗಾಜು ಪುಡಿಗೈದು, ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆಗೆ ಅಡಚಣೆ: ಕೇಸು ದಾಖಲು
ಕಾಸರಗೋಡು: ಕಾಸರಗೋಡು ನಗರ ಸಭಾ ಕಚೇರಿಗೆ ಅಕ್ರಮವಾಗಿ ನುಗ್ಗಿದ ವ್ಯಕ್ತಿಯೋರ್ವ ಬೊಬ್ಬೆ ಹಾಕಿ ಇಂಜಿನಿಯರಿಂಗ್ ಸ್ಟೋರ್ ಕೊಠಡಿಯ ಗಾಜನ್ನು ಒಡೆದು ಹಾನಿಗೊಳಿಸಿ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸಿದ ಘಟನೆ ನಡೆದಿದೆ. ಈ ಸಂಬಂಧ ನಗರಸಭೆಯ ಅಸಿಸ್ಟೆಂಟ್ ಕಾರ್ಯದರ್ಶಿ ಶೈಲೇಶ್ ಎಂ ನೀಡಿದ ದೂರಿನಂತೆ ಫೈಸಲ್ ಎಂಬಾತನ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಅಪರಾಹ್ನ ೩ ಗಂಟೆಗೆ ಆರೋಪಿ ನಗರಸಭಾ ಕಚೇರಿಗೆ ಅಕ್ರಮವಾಗಿ ನುಗ್ಗಿ ಈ ಕೃತ್ಯವೆಸಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಅಸಿಸ್ಟೆಂಟ್ ಕಾರ್ಯದರ್ಶಿ ತಿಳಿಸಿದ್ದಾರೆ.