ನಟ ಸುರೇಶ್‌ಗೋಪಿ ಮಗಳ ಮದುವೆ: ಪ್ರಧಾನಮಂತ್ರಿ ಗುರುವಾಯೂರಿಗೆ

ಗುರುವಾಯೂರು: ಸಿನಿಮಾ ನಾಟಕನಟ, ಮಾಜಿ ರಾಜ್ಯಸಭಾ ಸದಸ್ಯ, ಬಿಜೆಪಿ ನೇತಾರರೂ ಆಗಿರುವ ಸುರೇಶ್ ಗೋಪಿ ಅವರ ಮಗಳು ಭಾಗ್ಯರ ವಿವಾಹ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ಪಾಲ್ಗೊಳ್ಳುವರು.

ಜನವರಿ ೧೭ರಂದು ಸುರೇಶ್ ಗೋಪಿಯವರ ಮಗಳ ಮದುವೆ ಗುರುವಾಯೂರು ಕ್ಷೇತ್ರದಲ್ಲಿ ನಡೆಯಲಿದೆ. ಅದರಲ್ಲಿ ಮೋದಿ ಭಾಗವಹಿಸಿ ವಧೂವರರನ್ನು ಆಶೀರ್ವದಿಸುವರು.

ಇದರಂತೆ ಅಂದು ಬೆಳಿಗ್ಗೆ ೮ ಗಂಟೆಗೆ ಪ್ರಧಾನಮಂತ್ರಿ ಗುರುವಾ ಯೂರು ಕ್ಷೇತ್ರ ಸಂದರ್ಶಿಸಿ ದೇವರ ದರ್ಶನ ನಡೆಸು ವರು. ಆ ಬಳಿಕ ಮದುವೆ ಸಮಾರಂಭ ದಲ್ಲಿ ಭಾಗವಹಿಸುವರು. ಮಾತ್ರವಲ್ಲ ಅವರು ಗುರುವಾಯೂರಿನಲ್ಲಿ ಹಲವು ಹೊಸ ಯೋಜನೆಗಳ ಉದ್ಘಾಟನೆ ಯನ್ನು ನೆರವೇರಿಸಲಿದ್ದಾರೆಂಬ ಮಾಹಿತಿಯೂ ಲಭಿಸಿದೆ. ಇದರ ಹೊರತಾಗಿ ಅಲ್ಲಿಂದ ಅವರು ಬಳಿಕ ಎರ್ನಾಕುಳಂಗೆ  ತೆರಳಿ ಅಲ್ಲಿ ಹಲವು ಕೆಲವೊಂದು ಕಾರ್ಯಕ್ರಮಗಳಲ್ಲ್ಲೂ ಭಾಗವಹಿಸಲಿದ್ದಾ ರೆಂದೂ ಅದರೆ ಆ ಕಾರ್ಯಕ್ರಮ  ಯಾವುದೆಂಬುವುದು ಈ ತನಕ ಬಹಿರಂಗೊಂಡಿಲ್ಲ.

ಸುರೇಶ್‌ಗೋಪಿ ಕೆಲವು ದಿನಗಳ ಹಿಂದೆಯಷ್ಟೇ  ಪತ್ನಿ ರಾಧಿಕ, ಪುತ್ರಿ ಭಾಗ್ಯ ಸೇರಿದಂತೆ ಕುಟುಂಬ ಸಹಿತ ದಿಲ್ಲಿಗೆ ಸಾಗಿ ಪ್ರಧಾನಮಂತ್ರಿಯವರನ್ನು ನೇರವಾಗಿ ಸಂದರ್ಶಿಸಿ ಅವರಿಗೆ   ವಿವಾಹ  ಆಮಂತ್ರಣಪತ್ರ ನೀಡಿದ್ದರು.

ಮದುವೆ ಬಳಿಕ ಜನವರಿ ೨೦ರಂದು ಸುರೇಶ್ ಗೋಪಿ ತಿರುವನಂತಪುರ ಗ್ರೀನ್ ಫೀಲ್ಡ್ ಸ್ಟೇಡಿಯಂನಲ್ಲಿ ವಿವಾಹ ಸತ್ಕಾರ ಕೂಟವನ್ನು ಏರ್ಪಡಿಸಿದ್ದಾರೆ.

ಸುರೇಶ್ ಗೋಪಿಯವರ ಮಗಳ ವಿವಾಹ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡಾ ಭಾಗವಹಿಸುವ ಸಾಧ್ಯತೆಯಿದೆ. ಆದರೆ ಅದನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಲಾಗಿಲ್ಲ. ಪ್ರಧಾನಿಯವರ ಆಗಮನದ ಹಿನ್ನೆಲೆಯಲ್ಲಿ ಗುರುವಾಯೂರಿನಲ್ಲಿ ಅಗತ್ಯದ ಪೂರ್ವಭಾವಿ ಭದ್ರತಾ ಕ್ರಮದಲ್ಲಿ ಪೊಲೀಸರು ಈಗಾಗಲೇ ತೊಡಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page