ನಾಗರ ಹಾವಿನ ಕಡಿತದಿಂದ ಮಧ್ಯವಯಸ್ಕ ದಾರುಣ ಮೃತ್ಯು

ಮುಳ್ಳೇರಿಯ: ನಾಗರ ಹಾವಿನ ಕಡಿತದಿಂದ ಮಧ್ಯವಯಸ್ಕ ಮೃತಪಟ್ಟ ಘಟನೆ ಬೆಳ್ಳೂರಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಬೆಳ್ಳೂರು ಬಳಿಯ ಬೊಳ್ಳಂದೂರು ನಿವಾಸಿ ರಮೇಶ್ ಪೂಜಾರಿ (51) ಎಂಬವರು ಹಾವು ಕಡಿತದಿಂದ ಮೃತಪಟ್ಟ ದುರ್ದೈವಿಯಾಗಿದ್ದಾರೆ.

ನಿನ್ನೆ  ಬೆಳಿಗ್ಗೆ ಮನೆ ಬಳಿಯ ಕಟ್ಟಿಗೆ ತುಂಬಿಸುವ ಕೊಟ್ಟಿಗೆಯಲ್ಲಿ ಇವರಿಗೆ ನಾಗರಹಾವು ಕಚ್ಚಿದೆ. ಕೂಡಲೇ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಸ್ಥಿತಿ ಗಂಭೀರವಾಗಿದ್ದುದರಿಂದ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿ ದ್ದಂತೆ ದಾರಿ ಮಧ್ಯೆ ಸಾವು ಸಂಭವಿಸಿದೆ. ರಮೇಶ್ ಪೂಜಾರಿ ಅಡಿಕೆ ಮರವೇರುವ ಕಾರ್ಮಿಕನಾಗಿದ್ದು, ಊರಿನಲ್ಲ್ಲಿ ಚಿರಪರಿಚಿತರಾಗಿದ್ದರು.

ಶೇಷಪ್ಪ ಪೂಜಾರಿ-ಜಾನಕಿ ದಂಪತಿಯ ಪುತ್ರನಾದ ಮೃತರು ಪತ್ನಿ ಪ್ರೇಮ ಕುಮಾರಿ, ಮಕ್ಕಳಾದ ಅಶ್ವಿನ್, ಅಶ್ವಿತ, ಸಹೋದರ-ಸಹೋದರಿ ಯರಾದ ಗಿರೀಶ, ರೇವತಿ, ಜನಾರ್ದನ, ವಸಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page