ನಿಲಂಬೂರು ಗೆಲುವು: ವಿವಿಧೆಡೆ ಯುಡಿಎಫ್ ವಿಜಯೋತ್ಸವ

ಪೈವಳಿಕೆ: ನಿಲಂಬೂರು ವಿಧಾನಸಭಾ ಮಂಡಲದಲ್ಲಿ ನಡೆದ ಉಪಚುನಾವಣೆಯಲ್ಲಿ ಐಕ್ಯಪ್ರಜಾಪ್ರಭುತ್ವ ರಂಗದ ಅಭ್ಯರ್ಥಿ ಆರ್ಯಾಡನ್ ಶೌಕತ್‌ರ ಗೆಲುವಿನ ಬಗ್ಗೆ ಪೈವಳಿಕೆ ನಗರದಲ್ಲಿ ಯು.ಡಿ.ಎಫ್. ಪಂಚಾಯತ್ ಸಮಿತಿಯ ನೇತ್ವತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಮೆರವಣಿಗೆಯಲ್ಲಿ ಯು.ಡಿ.ಎಫ್. ಪಂಚಾಯತ್ ಸಮಿತಿ ಅಧ್ಯಕ್ಷ ವಸಂತಕುಮಾರ್, ಸಂಚಾಲಕ ಝೆಡ್ ಎ. ಕಯ್ಯಾರ್, ಸೈಫುಲ್ಲಾ ತಂಙಳ್, ನಾರಾಯಣ ಏದಾರ್, ರಾಘವೇಂದ್ರ ಭಟ್, ಅಸೀಸ್ ಕಳಾಯಿ ನೇತೃತ್ವ ನೀಡಿದರು. ಅಸೀಸ್ ಚೇವಾರ್, ಎಡ್ವರ್ಡ್ ಡಿ ಸೋಜ, ಶಿವರಾಮ ಶೆಟ್ಟಿ, ಝಾಕಿರ್, ಇಬ್ರಾಹಿಂ ಪದವು, ಗಂಗಾಧರ ನಾಯಕ್, ಮುಸ್ತಫ ಪದವು, ರಫೀಕ್ ಕಟ್ಟೆ, ನೌಫಲ್ ಅಲಿ ಭಾಗವಹಿಸಿದರು.

ಕಾಸರಗೋಡು: ನಿಲಂಬೂರಿನಲ್ಲಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಯುಡಿಎಫ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ಮೆರವಣಿಗೆ, ಸಿಹಿ ವಿತರಣೆ, ಸುಡುಮದ್ದು ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಯುಡಿಎಫ್ ಜಿಲ್ಲಾ ಅಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ, ಮಾಜಿ ಸಚಿವ ಸಿ.ಟಿ. ಅಹಮ್ಮದಾಲಿ, ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್, ಹಕೀಂ ಕುನ್ನಿಲ್, ಕೆ. ನೀಲಕಂಠನ್, ಎ. ಗೋವಿಂದನ್ ನಾಯರ್, ಎ. ಅಬ್ದುಲ್ ರಹಿಮಾನ್, ಹರೀಶ್ ಬಿ. ನಂಬ್ಯಾರ್, ಪಿ.ವಿ. ಸುರೇಶ್ ಸಹಿತ ಹಲವರು ಭಾಗವಹಿಸಿದರು.

RELATED NEWS

You cannot copy contents of this page