ನುಳ್ಳಿಪ್ಪಾಡಿಯಲ್ಲಿ ಅಂಡರ್ ಪ್ಯಾಸೇಜ್: ಕಲೆಕ್ಟರೇಟ್‌ಗೆ ಮಾರ್ಚ್

ಕಾಸರಗೋಡು: ನಗರದ ನುಳ್ಳಿ ಪ್ಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ  ಅಂಡರ್ ಪ್ಯಾಸೇಜ್ ನಿರ್ಮಿಸಬೇ ಕೆಂಬ ಬೇಡಿಕೆ ಮುಂದಿರಿಸಿ ಜನಪರ ಕ್ರಿಯಾ ಸಮಿತಿ ನೇತೃತ್ವದಲ್ಲಿ ಇಂದು ಬೆಳಿಗ್ಗೆ  ಕಲೆಕ್ಟರೇಟ್‌ಗೆ ಮಾರ್ಚ್ ನಡೆಸಲಾಯಿತು.  ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಅಂಡರ್ ಪ್ಯಾಸೇಜ್  ಕ್ರಿಯಾ ಸಮಿತಿ ಅಧ್ಯಕ್ಷ ಪಿ. ರಮೇಶ್ ಅಧ್ಯಕ್ಷತೆ ವಹಿಸಿದರು. ವಿವಿಧ ರಾಜಕೀಯ ಪಕ್ಷಗಳ ನೇತಾರರಾದ   ಎ. ವೇಲಾ ಯುಧನ್, ಎಂ.ರಾಜೀ ವನ್ ನಂಬ್ಯಾರ್, ಕೆ.ಎ.ಮೊಹಮ್ಮದ್ ಹನೀಫ್, ಅಸೀಸ್ ಕಡಪ್ಪುರಂ,  ಮೊದಲಾದವರು ನೇತೃತ್ವ ನೀಡಿದರು.

You cannot copy contents of this page