ಹಿರಿಯ ಬಡಗಿ ನಿಧನ

ಬಾಯಾರು: ಬಳ್ಳೂರು ನಿವಾಸಿ ವೆಂಕಟ್ರಮಣ ಆಚಾರ್ಯ (88) ನಿನ್ನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರು ಬಡಗಿ ಹಾಗೂ ಕೃಷಿಕರಾಗಿದ್ದರು. ಬಾಯಾರು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಹಿರಿಯ ಸದಸ್ಯರಾಗಿದ್ದರು. ಮೃತರು ಪತ್ನಿ ಯಶೋದ, ಮಕ್ಕಳಾದ ವಿಕ್ರಮ, ಭುವನೇಶ್ವರಿ, ಸರೋಜಿನಿ, ಶಶಿಧರ, ತಾರಾನಾಥ, ವನಿತಾ, ಸೊಸೆಯಂದಿ ರಾದ ರೇಣುಕಾ, ಶ್ಯಾಮಲ, ಶೋಭ, ಅಳಿಯಂದಿರಾದ ಲತೇಶ, ಪುಷ್ಪಾಕರ, ವಿನೋದ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಸಹೋದರ ದಾಮೋದರ ಆಚಾರ್ಯ, ಸಹೋದರಿಯರಾದ ಪಾರ್ವತಿ, ಚಂದ್ರಾವತಿ ಈ ಹಿಂದೆ ನಿಧನ ಹೊಂದಿದ್ದಾರೆ.
ನಿಧನಕ್ಕೆ ಬಾಯಾರು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ, ಶ್ರೀ ವಿಶ್ವಕರ್ಮ ಮಹಿಳಾ ಸಂಘ, ಶ್ರೀ ವಿಶ್ವಕರ್ಮ ಯುವಕ ಸಂಘ ಬಾಯಾರು ಸಂತಾಪ ಸೂಚಿಸಿದೆ.

RELATED NEWS

You cannot copy contents of this page