ನೇಶನಲ್ ಹೆರಾಲ್ಡ್ ಪ್ರಕರಣ ರಾಹುಲ್, ಸೋನಿಯಾಗಾಂಧಿಯನ್ನು ಮತ್ತೆ ವಿಚಾರಣೆಗೊಳಪಡಿಸಲು ಇ.ಡಿ ತೀರ್ಮಾನ
ದೆಹಲಿ: ನೇಶನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನೇತಾರರಾದ ಸೋನಿಯಾಗಾಂಧಿ ಹಾಗ ರಾಹುಲ್ ಗಾಂಧಿಯನ್ನು ಎನ್‌ಫೋರ್ಸ್ ಮೆಂಟ್ ಡೈರೆಕ್ಟರೇಟ್ (ಇಡಿ) ಮತ್ತೆ ವಿಚಾರಣೆ ಗೊಳಪಡಿಸಲು ತೀರ್ಮಾನಿಸಿದೆ.
ಈ ಪ್ರಕರಣದ ದೋಷಾರೋಪ ಪಟ್ಟಿಯನ್ನು ಶೀಘ್ರ ನ್ಯಾಯಾಲಯಕ್ಕೆ ಸಲ್ಲಿಸಲು ಇ.ಡಿ ತೀರ್ಮಾನಿಸಿದ್ದು, ಅದರ ಮೊದಲು ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿಯನ್ನು ಮತ್ತೆ ವಿಚಾರಣೆಗೊಳಪಡಿಸಲು ತೀರ್ಮಾ ನಿಸಿದೆ. ಅದರಂತೆ ಈ ಇಬ್ಬರು ನೇತಾರರಿಗೆ ಸಮನ್ಸ್ ಜ್ಯಾರಿಗೊಳಿಸಲು ಇ.ಡಿ ಮುಂದಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವರ್ಷ ಸೋನಿಯಾಗಾಂಧಿಯನ್ನು ಇ.ಡಿ ಮೂರು ದಿನಗಳ ತನಕ ಹಾಗೂ ರಾಹುಲ್ ಗಾಂಧಿಯನ್ನು ಐದು ದಿನಗಳ ತನಕ ಇ.ಡಿ ವಿಚಾರಣೆ ನಡೆಸಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು. ಮಾತ್ರವಲ್ಲ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕೋಶಾಧಿಕಾರಿ ಪವನ್ ಕುಮಾರ್ ಬನ್ಸಾಲ್ ಎಂಬವರನ್ನೂ ಕಳೆದ ವರ್ಷ ಇ.ಡಿ ವಿಚಾರಣೆಗೊಳಪಡಿಸಿತ್ತು. ಇದರ ಹೊರತಾಗಿ ಪವನ್ ಕುಮಾರ್ ಬನ್ಸಾಲ್‌ರನ್ನು ಇ.ಡಿ ಕಳೆದ ಎರಡು ದಿನದಿಂದ ವಿಚಾರಣೆಗೊಳಿಸುತ್ತಿದೆ.
ದಿಲ್ಲಿಯನ್ನು ಕೇಂದ್ರವನ್ನಾಗಿಸಿ ಕಾರ್ಯವೆಸಗುತ್ತಿರುವ ನೇಶನಲ್ ಹೆರಾಲ್ಡ್ ಕಚೇರಿಗೆ ಇ.ಡಿ ಈ ಹಿಂದೆ ದಾಳಿ ನಡೆಸಿತ್ತು. ಅಲ್ಲಿಂದ ಲಭಿಸಿದ ದಾಖಲುಪತ್ರಗಳ ಆಧಾರದಲ್ಲಿ ಪವನ್ ಕುಮಾರ್ ಬನ್ಸಾಲ್‌ರನ್ನು ಇ.ಡಿ ಈಗ ಮರು ವಿಚಾರಣೆ ಗೊಳಪಡಿಸುತ್ತಿದೆ. ಯಂಗ್ ಇಂಡಿಯ ಎಂಬ ಸಂಸ್ಥೆಗೆ ೨೦೧೯ರ ತನಕ ಶೆಲ್ ಸಂಸ್ಥೆಯಿಂದ ಹಣ ಹಸ್ತಾಂತರಿಸಿದ ಕುರಿತಾದ ದಾಖಲೆ ಗಳೂ ದಾಳಿ ವೇಳೆ ಪತ್ತೆಯಾಗಿದೆಯೆಂದು ಇ.ಡಿ ತಿಳಿಸಿದೆ. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತಾರ ರನ್ನು ಮತ್ತೆ ವಿಚಾರಣೆಗೊಳಪಡಿಸುವ ತೀರ್ಮಾನಕ್ಕೆ ಇ.ಡಿ ಮುಂದಾಗಿದೆ.