ಪಚ್ಚಂಬಳ ಮಖಾಂ ಉರೂಸ್ ನಾಳೆ ಸಮಾರೋಪ

ಕುಂಬಳೆ: ಎರಡು ವಾರಗಳಿಂದ ಸಂಭ್ರಮದಿಂದ ನಡೆಯುತ್ತಿರುವ ಇಚ್ಲಂಗೋಡು ಪಚ್ಚಂಬಳ ಮಖಾಂ ಉರೂಸ್ ನಾಳೆ ಸಮಾಪ್ತಿಗೊಳ್ಳಲಿದೆ. ಜಿಲ್ಲೆಯ ವಿವಿಧ ಭಾಗಗಳಿಂದ, ಕರ್ನಾ ಟಕದಿಂದಲೂ ನೂರಾರು ಮಂದಿ ವಿವಿಧ ದಿನ ನಡೆದ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿದ್ದಾರೆ. ಈ ತಿಂಗಳ ೪ರಂದು ಉರೂಸ್ ಕಾರ್ಯಕ್ರಮ ಗಳು ಆರಂಭಗೊಂಡಿತ್ತು.  ಈಗಾಗಲೇ ಹಲವು ಪ್ರಮುಖರು ತಲುಪಿ ಧಾರ್ಮಿ ಕ ಪ್ರವಚನ ನೀಡಿದ್ದಾರೆ. ಇಂದು ರಾತ್ರಿ ಸಮಾರೋಪ ಕಾರ್ಯಕ್ರಮವನ್ನು ಕಾಸರಗೋಡು ಸಂಯುಕ್ತ ಜಮಾ ಅತ್ ಖಾಝಿ ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್ ಉದ್ಘಾಟಿಸುವರು. ಕೆ.ಎಸ್. ಆಟ್ಟಕೋಯ ತಂಙಳ್ ಕುಂಬೋಲ್ ಅಧ್ಯಕ್ಷತೆ ವಹಿಸುವರು. ಇಚ್ಲಂಗೋಡು ಮುದರೀಸ್ ಮೊ ಯ್ದೀನ್ ಸಹದಿ ಪ್ರಾರ್ಥನೆ ನಡೆಸು ವರು. ಸಿರಾಜುದ್ದೀನ್ ಖಾಸಿಮಿ ಪತ್ತ ನಾಪುರಂ ಮುಖ್ಯ ಭಾಷಣ ನಡೆಸುವ ರು. ಖತೀಬ್ ಇರ್ಶಾದ್ ಫೈಸಿ, ಅನ್ಸಾ ರ್ ಶೆರೂರ್, ನ್ಯಾಯವಾದಿ ಅನಸ್, ಹಾರಿಸ್ ದಾರಿಮಿ, ಮಹಮ್ಮದ್ ಅಶ್ರಫ್ ಅಸಹರಿ ಮಾತನಾಡುವರು. ನಾಳೆ ಮೌಲೀದ್ ಮಜ್ಲಿಸ್‌ಗೆ ಕೆ.ಎಸ್. ಅಲಿ ತಂಙಳ್ ಕುಂಬೋಲ್ ನೇತೃತ್ವ ನೀಡುವರು.

You cannot copy contents of this page