ಪತಿಯ ಸಂಬಂಧಿಕನಿಂದ ಯುವತಿಗೆ ಹಲ್ಲೆ-ದೂರು
ಕುಂಬಳೆ: ಪತಿಯ ಸಂಬಂಧಿಕನೋರ್ವ ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ಯುವತಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಹಲ್ಲೆಯಿಂದ ಗಾಯ ಗೊಂಡ ಆರಿಕ್ಕಾಡಿ ಓಲ್ಡ್ ರೋಡ್ನ ನಫೀಸತ್ ಶಬಾನಾ (40) ಎಂಬವರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪತಿಯ ಸಂಬಂಧಿಕ ಆರಿಕ್ಕಾಡಿ ಓಲ್ಡ್ ರೋಡ್ನ ನವಾಬ್ ಎಂಬಾತ ಮನೆಗೆ ನುಗ್ಗಿ ಹಲ್ಲೆಗೈದಿರುವುದಾಗಿ ನಫೀಸತ್ ಶಬಾನಾ ಆರೋಪಿಸಿದ್ದಾರೆ.