ಪತ್ನಿ ಪ್ರಿಯತಮನೊಂದಿಗೆ ಪರಾರಿ: ಪತಿಯಿಂದ ಪ್ರಿಯತಮನ ತಾಯಿಯ ಕೊಲೆ
ಆಲಪ್ಪುಳ: ಪತ್ನಿಯೊಂದಿಗೆ ಪರಾರಿಯಾದ ಪ್ರಿಯತಮನ ತಾಯಿಯನ್ನು ತಲೆಗೆ ಹೊಡೆದು ಕೊಂದು ಪತಿ ಪ್ರತಿಕಾರಗೈದ ಘಟನೆ ನಡೆದಿದೆ. ಆಲಪ್ಪುಳ ಪುನ್ನಪ್ರ ವಾಡೈಕಲ್ ದಿ| ಬಾಬುರ ಪತ್ನಿ ಪ್ರಸನ್ನ (೬೪) ಕೊಲೆಗೀಡಾದವರು. ಆರೋಪಿ ಸುಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಕಬ್ಬಿಣದ ಸಲಾಖೆಯಿಂದ ಪ್ರಸನ್ನರ ತಲೆಗೆ ಹೊಡೆದು ಕೊಲೆಗೈಯ್ಯಲಾಗಿತ್ತು. ಸುಧಿಯ ಪತ್ನಿ ಹಾಗೂ ಪ್ರಸನ್ನರ ಪುತ್ರ ವಿನೀಸ್ ಮಧ್ಯೆ ಪ್ರೇಮವಿದ್ದು, ಯುವತಿಯನ್ನು ಈತ ಅಪಹರಿಸಿಕೊಂಡು ಹೋಗಿದ್ದನು. ಇದಕ್ಕೆ ಪ್ರತಿಕಾರವಾಗಿ ಸುಧಿ ವಿನೀಸ್‌ನ ಮನೆಗೆ ತಲುಪಿದ್ದು, ವಾಗ್ವಾದದ ಬಳಿಕ ತಲೆಗೆ ಬಡಿದು ಕೊಲೆಗೈದಿದ್ದನೆನ್ನಲಾಗಿದೆ. ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಸುಧಿ ಆರೋಪಿಯಾಗಿದ್ದಾನೆ.