ಪರೋಲ್‌ನಲ್ಲಿ ಹೊರ ಬಂದ ಆರೋಪಿ ಮತ್ತೆ ವಿವಾಹ, ಸೆರೆ

ದೆಹಲಿ: ಪತ್ನಿಯನ್ನು ಕೊಂದ ಪ್ರಕರಣದಲ್ಲಿ ಜೀವನಪರ್ಯಂತ ಶಿಕ್ಷೆ ಅನುಭವಿಸುತ್ತಿದ್ದ ಮಧ್ಯೆ ಪರೋಲ್‌ನಲ್ಲಿ ಹೊರಬಂದು ತಲೆಮರೆಸಿಕೊಂಡಿದ್ದ ನಿವೃತ್ತ ಸೈನಿಕ 20 ವರ್ಷಗಳ ಬಳಿಕ ಪೊಲೀಸರ ವಶವಾಗಿದ್ದಾನೆ. ಅನಿಲ್ ಕುಮಾರ್ ತಿವಾರಿ (೫೮)ನನ್ನು ಮಧ್ಯಪ್ರದೇಶದಿಂದ ಪೊಲೀಸರು ಸೆರೆ ಹಿಡಿದಿದ್ದಾರೆ.

1989ರಲ್ಲಿ ಅನಿಲ್ ಪತ್ನಿಯನ್ನು ಕೊಂದು ಮೃತದೇಹಕ್ಕೆ ಕಿಚ್ಚಿರಿಸಿದ್ದನು. ಬಳಿಕ ಆತ್ಮಹತ್ಯೆಗೆತ್ನಿಸಿದ್ದನಾದರೂ ಪೊಲೀಸರು ಈತನನ್ನು ಸೆರೆ ಹಿಡಿದಿದ್ದರು. ನ್ಯಾಯಾಲಯ ಈತನಿಗೆ ಜೀವನ ಪರ್ಯಂತ ಶಿಕ್ಷೆ ಘೋಷಿಸಿತ್ತು. ಈ ಮಧ್ಯೆ 2005ರಲ್ಲಿ ದೆಹಲಿ ಹೈಕೋರ್ಟ್ ಎರಡು ವಾರದ ಪರೋಲ್ ನೀಡಿತ್ತು. ಈ ವೇಳೆ ಹೊರಬಂದ ಅನಿಲ್ ಕುಮಾರ್ ತಲೆ ಮರೆಸಿಕೊಂಡಿದ್ದನು. ಸೇನೆಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯಾಗಿದ್ದಾನೆ ಅನಿಲ್. ಮೊಬೈಲ್ ಪೋನ್ ಉಪಯೋಗಿಸದೆ ತನ್ನ ಇರುವಿಕೆಯನ್ನು ಲಭ್ಯವಲ್ಲದಂತೆ ಮಾಡಿ ತಲೆಮರೆಸಿಕೊಂಡಿದ್ದ ಈತ ವಿವಿಧ ಕಡೆಗಳಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸಿದ್ದನು. ಈ ಕಾಲದಲ್ಲಿ ಮತ್ತೆ ವಿವಾಹವಾಗಿದ್ದು, ಈ ಸಂಬಂಧದಲ್ಲಿ ನಾಲ್ಕು ಮಕ್ಕಳು ಇದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page