ಪಾನೂರು ಬಾಂಬ್ ಸ್ಫೋಟ ಪ್ರಕರಣ: ಆರೋಪಿಗಳಿಗೆ ಜಾಮೀನು

ಕಣ್ಣೂರು: ಪಾನೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿ ಗಳಾದ ಡಿವೈಎಫ್‌ಐ ಕಾರ್ಯಕರ್ತರಾದ ಮೂರು ಮಂದಿಗೆ ಜಾಮೀನು ಲಭಿಸಿದೆ. ಅರುಣ್, ಶಿಬಿನ್‌ಲಾಲ್, ಅತುಲ್ ಎಂಬಿವರಿಗೆ  ತಲಶ್ಶೇರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಜಾಮೀನು ನೀಡಿರುವುದು. ಸ್ಫೋಟ ಘಟನೆ ನಡೆದು 90  ದಿನಗಳು ಕಳೆದರೂ ಪೊಲೀಸರು ಆರೋಪ ಪಟ್ಟಿ ಸಲ್ಲಿಸದಿರುವುದರ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿ ಗಳಿಗೆ ಜಾಮೀನು ಮಂಜೂರು ಮಾಡಿದೆ.

ಕಳೆದ ಎಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಾಂಬ್ ಸ್ಫೋಟ ಉಂಟಾಗಿತ್ತು. ಜನವಾಸವಿಲ್ಲದ ಮನೆಯೊಂದರಲ್ಲಿ ಬಾಂಬ್ ನಿರ್ಮಿಸುತ್ತಿದ್ದ ವೇಳೆ ಸ್ಫೋಟ ಉಂಟಾಗಿತ್ತು. ಪ್ರಕರಣದಲ್ಲಿ ಪ್ರಥಮ ಆರೋಪಿ ವಿನೀಶ್‌ನನ್ನು ಪೊಲೀಸರು ಸೆರೆ ಹಿಡಿದಿದ್ದರು. ಗಾಯಗೊಂಡಿದ್ದ ಈತ ಆಸ್ಪತ್ರೆಯಿಂದ ಬಿಡುಗಡೆಗೊಂಡ ಕೂಡಲೇ ಬಂಧಿಸಲಾಗಿತ್ತು. ಈತ ಬಾಂಬ್ ನಿರ್ಮಾಣದ ಸೂತ್ರಧಾರ ಎಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page