ಪುತ್ತಿಗೆಯಲ್ಲಿ ಸ್ಮಾರ್ಟ್ ವಿಲ್ಲೇಜ್ ಆಫೀಸ್ ಉದ್ಘಾಟನೆಗೆ ಸಿದ್ಧ
ಪುತ್ತಿಗೆ: ಪುತ್ತಿಗೆ ಪಂಚಾಯತ್‌ನ ಸ್ಮಾರ್ಟ್ ಗ್ರಾಮ ಕಚೇರಿ ನಿರ್ಮಾಣ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧಗೊಂಡಿದೆ. ಕಟ್ಟಡದಲ್ಲಿ ಇನ್ನು ಪೀಠೋಪಕರಣ ಹಾಗೂ ಐಟಿ ವ್ಯವಸ್ಥೆ ಏರ್ಪಡಿಸಲು ಮಾತ್ರವೇ ಬಾಕಿಯಿದೆ. ಈ ಕೆಲಸ ಪೂರ್ತಿಗೊಂಡರೆ ಸಂಬಂ ಧಪಟ್ಟ ಇಲಾಖೆಯಿಂದ ಉದ್ಘಾಟನೆ ದಿನ ನಿಗದಿಯಾಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
75 ಲಕ್ಷ ರೂಪಾಯಿ ವ್ಯಯಿಸಿ ಎರಡು ಅಂತಸ್ತಿನ ಕಟ್ಟಡ ನಿರ್ಮಿ ಸಲಾಗಿದೆ. 2023 ಅಗೋಸ್ತ್‌ನಲ್ಲಿ ಶಾಸಕ ಎಕೆಎಂ ಅಶ್ರಫ್ ಈ ಕಟ್ಟಡಕ್ಕೆ ಶಿಲಾನ್ಯಾಸ ನಡೆಸಿದ್ದರು.