ಪುತ್ರ ದೂಡಿಹಾಕಿ ಗಂಭೀರ ಗಾಯಗೊಂಡ ತಾಯಿ ಮೃತ್ಯು

ಕಾಸರಗೋಡು: ಪುತ್ರ ದೂಡಿಹಾಕಿ ಗಂಭೀರ ಗಾಯಗೊಂಡ ತಾಯಿ ಸಾವನ್ನಪ್ಪಿದ ಘಟನೆ ನಡೆದಿದೆ.

ನೀಲೇಶ್ವರ ಸಮೀಪದ ಚಾಯೋತ್ತ್ ಇಡಿಚ್ಚೂಟ್ ತಟ್ಟಿನ ಸುಲೋಚನ (65) ಸಾವನ್ನಪ್ಪಿದ ಮಹಿಳೆ. ಕಳೆದ ಅಕ್ಟೋಬರ್ ೯ರಂದು ರಾತ್ರಿ ಮದ್ಯದಮಲಿನಲ್ಲಿ ಪುತ್ರ ಸುನೀಶ್  (35) ಸುಲೋಚನರನ್ನು ಮನೆಯಲ್ಲಿ ದೂಡಿ ಹಾಕಿದ್ದನು. ಅದರಿಂದ ಗಂಭೀರ ಗಾಯಗೊಂಡ ಸುಲೋಚನಾರನ್ನು  ನೆರೆಮನೆಯವರು ಮೊದಲು ಹೊಸದುರ್ಗದಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ನಂತರ  ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದರು. ಇದಕ್ಕೆ ಸಂಬಂಧಿಸಿ ಪೊಲೀಸರು ಸುನೀಶ್‌ನ ವಿರುದ್ಧ ಮೊದಲು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು.

ಸುಲೋಚನಾ ಈಗ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಆ ಪ್ರಕರಣವನ್ನು  ಕೊಲೆ ಪ್ರಕರಣವಾಗಿ ಬದಲಾಯಿಸ ಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ದಿ| ಮೋಹನನ್‌ರ ಪತ್ನಿಯಾಗಿರುವ ಸುಲೋಚನ ಇನ್ನೋರ್ವ ಪುತ್ರ ಸುಮೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page