ಪುರಂದರದಾಸ ಸಂಗೀತ ಕಲಾಮಂದಿರದಿಂದ ಸಂಗೀತ ಆರಾಧನೋತ್ಸವ ನಾಳೆಯಿಂದ

ಕಾಸರಗೋಡು: ಶ್ರೀಪುರಂದರ ದಾಸ ಸಂಗೀತ ಕಲಾಮಂದಿರದ 21ನೇ ಸಂಕೀರ್ತನಾ ಆರಾಧನೋತ್ಸವ ನಾಳೆ ಹಾಗೂ 9ರಂದು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದ ವ್ಯಾಸಮಂಟಪದಲ್ಲಿ ನಡೆಯಲಿದೆ. ನಾಳೆ ಬೆಳಿಗ್ಗೆ ಉದ್ಘಾಟನೆ ಬಳಿಕ ಸರಸ್ವತಿ ಕೃಷ್ಣನ್ ಮತ್ತು ಬಳಗ, ಕೆರೆಮನೆ ಮನಮೋಹನ ಮತ್ತು ಬಳಗ, ಯೋಗೀಶ್ ಶರ್ಮ ಬಳ್ಳಪದವು ಮತ್ತು ಬಳಗ, ಉಷಾ ಈಶ್ವರ ಭಟ್ ಮತ್ತು ಬಳಗ, ರಮ್ಯಾ ನಂಬೂದಿರಿ ಇವರಿಂದ ಹಾಡುಗಾರಿಕೆ ನಡೆಯಲಿದೆ.

ಅಪರಾಹ್ನ ಕೋಳಿಕ್ಕಜೆ ಬಾಲ ಸುಬ್ರಹ್ಮಣ್ಯ ಭಟ್, ಡಾ. ಹೇಮಶ್ರೀ, ಶ್ರೀವಾಣಿ, ರಾಧಾಮುರಳೀಧರ, ವೀಕ್ಷಣ್ ಉಡುಪಿ, ರಂಜಿನಿ ಇವರಿಂದ ಹಾಡುಗಾರಿಕೆ, 5.30ರಿಂದ ವೀಣಾ ವಯಲಿನ್ ದ್ವಂದ್ವ ಕಛೇರಿ, 9ರಂದು ಬೆಳಿಗ್ಗೆ 8.30ಕ್ಕೆ ಪಂಚರತ್ನ ಕೀರ್ತನೆ ಹಾಗೂ ವಿವಿಧ ಸಂಗೀತ ವಿದ್ವಾನ್‌ರಿಂದ ಸಂಗೀತ ಕಛೇರಿ ನಡೆಯಲಿದೆ. ಸಂಜೆ 3.30ಕ್ಕೆ ಈಶ್ವರ ಭಟ್ ವಿದ್ಯಾಸಾಗರ, ಕಾಸರಗೋಡು ಚಿನ್ನಾ ಇವರನ್ನು ಸನ್ಮಾನಿಸಲಾಗುವುದು. ನಂತರ ಹಾಡುಗಾರಿಕೆ ಕಛೇರಿ ಜರಗಲಿದೆ. ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ಶತಾಯುಷಿ ವಿದ್ವಾನ್ ಕೆ. ಬಾಬು ರೈ ಉಪಸ್ಥಿತರಿರುವರು ಎಂದು ಸಂಸ್ಥೆಯ ಸಂಸ್ಥಾಪಕ ಕಲ್ಮಾಡಿ ಸದಾಶಿವ ಆಚಾರ್ಯ ತಿಳಿಸಿದ್ದಾರೆ.

You cannot copy contents of this page