ಪೆರಿಯ ಅವಳಿ ಕೊಲೆ ಪ್ರಕರಣ: ಎರಡು ಸಾಕ್ಷಿದಾರರಿಗೆ ಭದ್ರತೆ ಒದಗಿಸುವಂತೆ ನ್ಯಾಯಾಲಯ ನಿರ್ದೇಶ
ಕಾಸರಗೋಡು: ರಾಜ್ಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ ಪೆರಿಯ ಯೂತ್ ಕಾಂಗ್ರೆಸ್ ಕಾರ್ಯ ಕರ್ತರಿಬ್ಬರನ್ನು ಬರ್ಬರವಾಗಿ ಕೊಲೆಗೈದ ಪ್ರಕರಣದ ಸಾಕ್ಷಿದಾರರ ಪೈಕಿ ಇಬ್ಬರಿಗೆ ಪೊಲೀಸ್ ಭದ್ರತೆ ಒದಗಿಸುವಂತೆ ಈ ಪ್ರಕರಣದ ವಿಚಾರಣೆ ನಡೆಸತ್ತಿರುವ ಕೊಚ್ಚಿಯ ವಿಶೇಷ ಸಿಬಿಐ ನ್ಯಾಯಾಲ ಯ ಪೊಲೀಸರಿಗೆ ನಿರ್ದೇಶ ನೀಡಿದೆ.
ಈ ಕೊಲೆ ಪ್ರಕರಣದ ಸಾಕ್ಷಿದಾರರ ಪೈಕಿ ಓರ್ವ ವೈದ್ಯರೂ ಸೇರಿದಂತೆ ಇಬ್ಬರು ತಮಗೆ ಸಾಕ್ಷಿ ಹೇಳಿಕೆ ನೀಡುವುದರ ವಿರುದ್ಧ ಕೆಲವು ಸಿಪಿಎಂ ಹಿತೈಷಿಗಳಿಂದ ಬೆದರಿಕೆ ಉಂ ಟಾಗಿದೆಯೆಂದು ಅವರು ಸಾಕ್ಷಿ ಹೇಳಿಕೆ ನೀಡುವ ವೇಳೆ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಮಾತ್ರವಲ್ಲ ತಮಗೆ ಭದ್ರತೆ ಒದಗಿಸುವಂತೆಯೂ ಅವರು ವಿನಂತಿಸಿಕೊಂಡಿದ್ದರು. ಅದನ್ನು ಪರಿಗಣಿಸಿದ ನ್ಯಾಯಾಲಯ ಈ ಇಬ್ಬರು ಸಾಕ್ಷಿದಾರರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಕೊನೆಗೆ ಪೊಲೀಸ್ ಇಲಾಖೆ ನಿರ್ದೇಶ ನೀಡಿದೆ.