ಪ್ರಕೃತಿ ವಿಕೋಪ: ಜಿಲ್ಲೆಯಲ್ಲಿ 250.3 ಲಕ್ಷ ರೂ.ಗಳ ಕೃಷಿ ನಾಶ


ಕಾಸರಗೋಡು: ಜೂನ್ 1ರಿಂದ 17ರವರೆಗೆ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ 250.32 ಲಕ್ಷ ರೂ.ಗಳ ನಾಶನಷ್ಟ ಉಂಟಾಗಿರುವು ದಾಗಿ ಲೆಕ್ಕ ಹಾಕಲಾಗಿದೆ. ಇದರಲ್ಲಿ ಅರ್ಧದಷ್ಟು ಬಾಳೆ ಕೃಷಿಗೆ ಉಂಟಾದ ಹಾನಿಯಾಗಿದೆ. 5466 ಬಾಳೆ ಕೃಷಿಕರ 8.55 ಹೆಕ್ಟರ್ ಸ್ಥಳದಲ್ಲಿ 21,363 ಬಾಳೆಗಳಿಂದ 128.18 ಲಕ್ಷ ರೂ. ನಷ್ಟ, 136 ಕೃಷಿಕರ 1.40 ಹೆಕ್ಟರ್ ಸ್ಥಳದಲ್ಲಿ ಫಲ ನೀಡದ 3511 ತೆಂಗುಗಳಿAದಾಗಿ 14.04 ಲಕ್ಷ ರೂ. ನಷ್ಟ ಸೇರಿ 142.24 ಲಕ್ಷ ರೂ.ಗಳ ನಷ್ಟ ಉಂಟಾಗಿದೆ. 527 ತೆಂಗಿನಕಾಯಿ ಕೃಷಿಕರ 7.71 ಹೆಕ್ಟರ್ ಸ್ಥಳದಲ್ಲಿ 4349 ತೆಂಗುಗಳಿAದಾಗಿ 67.45 ಲಕ್ಷ ರೂ.ಗಳ ನಷ್ಟ ಹಾಗೂ ಎಂಟು ಕೃಷಿಕರ ಕಾಯಿ ಬಿಡದ 11 ತೆಂಗುಗಳಿAದಾಗಿ 0.33 ಲಕ್ಷ ರೂ.ಗಳ ನಷ್ಟ ಉಂಟಾಗಿದೆ.
ರಬ್ಬರ್ ವಲಯದಲ್ಲಿ 32 ಕೃಷಿಕರ 0.56 ಹೆಕ್ಟರ್ ಸ್ಥಳದಲ್ಲಿ ಟ್ಯಾಪಿಂಗ್ ನಡೆಸುವ 349 ರಬ್ಬರ್ಗಳಿಂದಾಗಿ 6.98 ಲಕ್ಷ ರೂ.ಗಳ ನಷ್ಟ, ಇಬ್ಬರು ರಬ್ಬರ್ ಕೃಷಿಕರ ಟ್ಯಾಪಿಂಗ್ ನಡೆಸದ 6 ರಬ್ಬರ್ ಮರಗಳಿಂದಾಗಿ 0.09 ಲಕ್ಷ ರೂ. ನಷ್ಟ ಉಂಟಾಗಿದೆ. ಕಂಗು ಕೃಷಿಯಲ್ಲಿ 1010 ಕೃಷಿಕರ 5.80 ಹೆಕ್ಟರ್ ಸ್ಥಳದಲ್ಲಿ 7946 ತೆಂಗುಗಳಿAದಾಗಿ 23.84 ಲಕ್ಷ ರೂ.ಗಳ ನಷ್ಟ, 60 ಕೃಷಿಕರ 0.23 ಹೆಕ್ಟರ್ ಸ್ಥಳದಲ್ಲಿ ಫಲ ನೀಡದ 313 ಕಂಗುಗಳಿAದಾಗಿ 0.78 ಲಕ್ಷ ರೂ.ಗಳ ನಷ್ಟ ಸಂಭವಿಸಿದೆ.
ಕಾಳು ಮೆಣಸು ಕೃಷಿ ಕೈಗೊಂಡ ಕೃಷಿಕರಿಗೂ, ತರಕಾರಿ ಕೃಷಿಕರಿಗೂ ಐದು ಹೆಕ್ಟರ್ ಸ್ಥಳದಲ್ಲಿ 2.25 ಲಕ್ಷ ರೂ.ಗಳ ನಷ್ಟ, 83 ಭತ್ತ ಕೃಷಿಕರಿಗೆ 4200 ಹೆಕ್ಟರ್ನಿಂದಾಗಿ 6.30 ಲಕ್ಷ ರೂ.ಗಳ ನಷ್ಟ ಸಂಭವಿಸಿದೆ.

RELATED NEWS

You cannot copy contents of this page