ಪ್ರಧಾನಿಯಾಗಿ ಇಂದಿಗೆ 11 ವರ್ಷ ಪೂರೈಸಿದ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಎನ್ಡಿಎ ಸರಕಾರ ಇಂದಿಗೆ 11 ವರ್ಷ ಪೂರೈಸಿದೆ. ಇದರಂಗವಾಗಿ ಕೇಂದ್ರ ಸರಕಾರ ವಿವಿಧ ಅಭಿವೃದ್ಧಿ ಯೋಜನೆಗಳಿಗೂ ಇಂದು ಚಾಲನೆ ನೀಡಿದೆ.
ಪ್ರಧಾನಮಂತ್ರಿ ಮೋದಿ ನೇತೃತ್ವದ ಮೂರನೇ ಸರಕಾರ ಇದಾಗಿದೆ. ಈ 11 ವರ್ಷಗಳಲ್ಲಿ ಮೋದಿ ಸರಕಾರ ಸಾಧನೆಗಳ ಕುರಿತು ಬಿಜೆಪಿ ನೇತೃತ್ವದಲ್ಲಿ ದೇಶದಾದ್ಯಂತ ಇಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಾತ್ರವಲ್ಲ ಮೋದಿ ಸರಕಾರದ ಮೂರನೇ ಅವಧಿಯ ಸಾಧನೆಗಳ ಮಾಹಿತಿಯನ್ನೂ ನೇತರರು ನೀಡತೊಡಗಿದ್ದಾರೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಮೋದಿ ಸರಕಾರದ ಪ್ರಧಾನ ಸಾಧನೆಗಳೆಂದರೆ ಬಲಿಷ್ಠ ಜಪಾನ್ನ್ನು ಹಿಂದಿಕ್ಕಿ ಜಗತ್ತಿನ ನಾಲ್ಕನೇ ಆರ್ಥಿಕ ದೇಶವಾಗಿ ಭಾರತ ಹೊರಹೊಮ್ಮಿದೆ. 12 ಲಕ್ಷ ರೂಪಾಯಿ ವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ಪಾವತಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಸುಮಾರು 60 ಕೋಟಿ ಜನರು ಆಗಮಿಸಿದ ಪ್ರಯಾಗ್ ರಾಜ್ ಕುಂಭಮೇಳವನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ವಿರುದ್ಧ ಯಶಸ್ವಿಯಾಗಿ ಆಪರೇಶನ್ ಸಿಂಧೂರ್ ಕಾರ್ಯಾ ಚರಣೆ ನಡೆಸಲಾಗಿದೆ. ಇದು ಕಳೆದ ಒಂದು ವರ್ಷದಲ್ಲಿ ನರೇಂದ್ರಮೋದಿ ನೇತೃತ್ವದ ಸರಕಾರ ಮಾಡಿದ ಮಹತ್ಸಾದನೆಯೆಂದು ಬಿಜೆಪಿ ಹೇಳಿದೆ.
2014ರಲ್ಲಿ 65,500 ಕಿ.ಮೀ ಇದ್ದ ಹೆದ್ದಾರಿಗಳು ಈಗ 1,46,145 ಕಿ.ಮೀಗೆ ವಿಸ್ತರಿಸಲಾಗಿದೆ. 2014ರಲ್ಲಿ 74 ವಿಮಾನ ನಿಲ್ದಾಣಗಳಿದ್ದ ಭಾರತದಲ್ಲಿ 24ರ ಹೊತ್ತಿಗೆ ಆ ಸಂಖ್ಯೆ 157ಕ್ಕೇರಿದೆ. ಗ್ರಾಮೀಣ ಸಡಕ್ ಯೋಜನೆಯಲ್ಲಿ 2014ರಲ್ಲಿ 4,19,358 ಕಿ.ಮೀ ರಸ್ತೆ ನಿರ್ಮಿಸಲಾದರೆ 2024-25ರ ಹೊತ್ತಿಗೆ 7,71,950 ಕಿ.ಮೀ. ರಸ್ತೆ ನಿರ್ಮಿಸಲಾಗಿದೆ. 2014ರಲ್ಲಿ 7 ಏಮ್ಸ್ ಆಸ್ಪತ್ರೆಗಳಿದ್ದು ಈಗ ಅದು23 ಆಗಿ ಹೆಚ್ಚಿದೆ. ಮಾತ್ರವಲ್ಲದೆ ಈ ಅವಧಿಯಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 387ರಿಂದ 760ಕ್ಕೇರಿದೆ. ದೇಶ ಇನ್ನಷ್ಟು ಬಲಿಷ್ಠವಾಗಿದೆ. 11 ವರ್ಷಗಳ ಅಧಿಕಾರಾವಧಿಯಲ್ಲಿ ಪ್ರಧಾನಿ ಮೋದಿ ಒಂದೇ ಒಂದು ರಜೆ ತೆಗೆದುಕೊಳ್ಳಲಿಲ್ಲ. ದೇಶದ ಅಭಿವೃದ್ಧಿ ವೇಗವರ್ಧಕದತ್ತ ಹೆಜ್ಜೆಹಾಕುವ ಪ್ರಧಾನ ನಿಲುವನ್ನು ಪ್ರಧಾನಮಂತ್ರಿ ಹೊಂದಿದ್ದಾರೆ. ಕಾಶ್ಮೀರದ 370ನೇ ವಿಧಿಯನ್ನು ರದ್ದುಪಡಿಸಿದ ನಿರ್ಧಾರ ಐತಿಹಾಸಿಕವಾ ಗಿತ್ತೆಂದು ಬಿಜೆಪಿ ಹೇಳಿದೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page