ಬಂದಡ್ಕ ಪೇಟೆಯ ವರ್ಕ್‌ಶಾಪ್ ಮಾಲಕ ಚರಂಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಬಂದಡ್ಕ ಪೇಟೆಯಲ್ಲಿ ಯುವಕನೋರ್ವ ಚರಂಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಬಂದಡ್ಕ ಪೆಟ್ರೋಲ್ ಬಂಕ್ ಸಮೀಪದ ಮಂಗಲತ್ತ್ ಹೌಸ್ ನಿವಾಸಿ ರತೀಶ್ (42) ಮೃತಪಟ್ಟವರು.

ಇಂದು ಮುಂಜಾನೆ ೩.೪೫ರ ವೇಳೆ ಮೃತದೇಹ ಕಂಡುಬಂದಿದೆ. ಮನೆ ಸಮೀಪದಲ್ಲಿ ಸ್ವಂತ ವರ್ಕ್ ಶಾಪ್ ಹೊಂದಿರುವ ರತೀಶ್ ಖಾಸಗಿ ಆಸ್ಪ ತ್ರೆಯ ಆಂಬುಲೆನ್ಸ್ ಚಾಲಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ 9.45ರ ವೇಳೆ ಮನೆಗೆ ತಲುಪಿದ ಬಳಿಕ ಆಸ್ಪತ್ರೆಗೆ ತೆರಳಲು ಇದೆ ಎಂದು ಹೇಳಿ ಮನೆಯಿಂದ ಹೊರಟಿದ್ದರು. ಬಳಿಕ ಮಾಹಿತಿ ಲಭಿಸಿರಲಿಲ್ಲ. ಇಂದು ಮುಂಜಾನೆ ವರ್ಕ್‌ಶಾಪ್ ಸಮೀಪದ ಚರಂಡಿಯಲ್ಲಿ ಅಂಗಾತ ಮಲಗಿದ ಸ್ಥಿತಿಯಲ್ಲಿ ರತೀಶ್‌ರ ಮೃತದೇಹ ಕಂಡುಬಂದಿದೆ.  ಮೃತದೇಹವನ್ನು ಮಹಜರಿಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡುಹೋಗಲಾಗಿದೆ.

ಇದೇ ವೇಳೆ ರತೀಶ್‌ರ ವರ್ಕ್ ಶಾಪ್ ಸಮೀಪದಲ್ಲಿ ಸ್ಕೂಟರ್ ಮಗುಚಿಬಿದ್ದ ಸ್ಥಿತಿಯಲ್ಲೂ ಪತ್ತೆಹಚ್ಚ ಲಾಗಿದೆ. ಸ್ಕೂಟರ್ ನಿಲ್ಲಿಸುವುದರ ಮಧ್ಯೆ ಆಯತಪ್ಪಿ ಚರಂಡಿಗೆ ಬಿದ್ದು ತಲೆಗೆ ಗಾಯವಾಗಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ ಬೇಡಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.

ರವೀಂದ್ರನ್ ನಾಯರ್-ಬಾಲಾಮಣಿ ಅಮ್ಮ ದಂಪತಿಯ ಪುತ್ರನಾದ ರತೀಶ್ ಪತ್ನಿ ನಿಮಿತ, ಪುತ್ರ ಅನಯ್, ಸಹೋದರಿಯರಾದ ದೀಪಾ, ಶೋಭ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

You cannot copy contents of this page