ಬದಿಯಡ್ಕ ಮಂಡಲ ಕಾಂಗ್ರೆಸ್ ನೂತನ ಕಚೇರಿ ಉದ್ಘಾಟನೆ

ಬದಿಯಡ್ಕ: ಮಂಡಲ ಸಮಿತಿಯ ನೂತನ ಕಚೇರಿಯನ್ನು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸೋಮಶೇಖರ್ ಎಣ್ಮ ಕಜೆ ಉದ್ಘಾಟಿಸಿದರು. ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಅತೀ ಹೆಚ್ಚು ಸ್ಥಾನ ಗಳಿಸಲು ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಮಂಡಲ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಕರ್ಷಕ ಕಾಂಗ್ರೆಸ್ ನೇತಾರ ಚಂದ್ರಹಾಸ ರೈ, ಕರ್ಷಕ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ತಿರುಪತಿ ಕುಮಾರ್ ಭಟ್, ಮಂಡಲ ಉಪಾ ಧ್ಯಕ್ಷ ಜಗನ್ನಾಥ ರೈ , ಐಎನ್‌ಟಿಯುಸಿ ಮಂಡಲ ಅಧ್ಯಕ್ಷ ರಾಮಕೃಷ್ಣ, ಶಾಫಿ ಗೋಳಿಯಡ್ಕ ಯೂತ್ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮ್ಯಾಥ್ಯು ಪಳ್ಳತ್ತಡ್ಕ, ಕೆಎಸ್‌ಯು ನೇತಾರ ಜೋಬಿನ್, ನಿರಂಜನ್ ರೈ, ಲೋಹಿತಾಕ್ಷ ನಾಯರ್ ಪಟ್ಟಾಜೆ, ಸುಂದರ ಚುಕ್ಕಿನಡ್ಕ, ವಾಮನ ಚುಕ್ಕಿನಡ್ಕ, ಸುಮಂತು ಸಿರಿಲ್ ಕ್ರಾಸ್ತಾ, ನಾರಾಯಣ ಪುದುಕೋಳಿ ಮೊದಲಾದವರು ಮಾತನಾಡಿದರು. ಜೋನಿ ಕಾರ್ಮಾರ್ ಸ್ವಾಗತಿಸಿ, ರವಿ ಮೆಣಸಿನಪಾರೆ ವಂದಿಸಿದರು.

RELATED NEWS

You cannot copy contents of this page