ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದು ಕಂದಕಕ್ಕೆ ಮಗುಚಿಬಿದ್ದ ವ್ಯಾನ್: ಚಾಲಕನನ್ನು ಅಪಾಯದಿಂದ ರಕ್ಷಿಸಿದ ನಾಗರಿಕರು 

ಬದಿಯಡ್ಕ: ನಿಯಂತ್ರಣ ತಪ್ಪಿದ ಓಮ್ನಿ ವ್ಯಾನ್ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಬಳಿಕ 12 ಅಡಿ ಆಳದ ಕಂದಕಕ್ಕೆ ಮಗುಚಿಬಿದ್ದಿದೆ.  ದೀರ್ಘ ಹೊತ್ತು ವ್ಯಾನ್‌ನಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ನಾಗರಿಕರು ಅತೀ ಸಾಹಸಿಕವಾಗಿ  ರಕ್ಷಿಸಿದ್ದಾರೆ.

ಬದಿಯಡ್ಕ ವಿದ್ಯಾಗಿರಿ ಬಜದ ಸತ್ಯನಾರಾಯಣ ಭಟ್ (70)  ಎಂಬವರನ್ನು ನಾಗರಿಕರು ರಕ್ಷಿಸಿದ್ದಾರೆ. ಬಳಿಕ  ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ 7 ಗಂಟೆ ವೇಳೆ  ವಿದ್ಯಾಗಿರಿ ನವಕಾನ ಎಂಬಲ್ಲಿ ಅಪಘಾತವುಂಟಾ ಗಿದೆ.   ಶುಗರ್ ತಪಾಸಣೆಗಾಗಿ ಸತ್ಯನಾರಾ ಯಣ ಭಟ್   ಬದಿಯಡ್ಕಕ್ಕೆ ತೆರಳುತ್ತಿ ದ್ದರು. ನವಕಾನಕ್ಕೆ ತಲುಪುತ್ತಿದ್ದಾಗ ವ್ಯಾನ್ ನಿಯಂತ್ರಣ ತಪ್ಪಿ ರಸ್ತೆ ಬದಿಯ  ಮರಕ್ಕೆ ಢಿಕ್ಕಿ ಹೊಡೆದು ಹೊಂಡಕ್ಕೆ ಮಗುಚಿಬಿದ್ದಿದೆ.  ದೀರ್ಘ ಹೊತ್ತಿನ ಬಳಿಕ ಆ ರಸ್ತೆಯಲ್ಲಿ ತೆರಳಿದ ಪ್ರಸಾದ್ ಮುನಿಯೂರು ಎಂಬವರಿಗೆ ವ್ಯಾನ್ ಅಪಘಾತಕ್ಕೀಡಾಗಿರುವುದು ಕಂಡುಬಂದಿದೆ. ಕೂಡಲೇ ಅವರು ಸಾಮಾಜಿಕ ಕಾರ್ಯಕರ್ತ ಹಾರಿಸ್ ಬಿಡಿಕೆ ಎಂಬವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಹಾರಿಸ್, ಸುಧಾಕರ, ಪಂ. ಸದಸ್ಯ ಬಾಲಕೃಷ್ಣ ಶೆಟ್ಟಿ, ಸೂಪಿ ಹಾಜಿ ಸಹಿತ ಸ್ಥಳೀಯರು ಸ್ಥಳಕ್ಕೆ ತಲುಪಿ ಜೆಸಿಬಿಯ ಸಹಾಯದಿಂದ ವ್ಯಾನ್‌ನೊಳಗೆ ಸಿಲುಕಿಕೊಂಡಿದ್ದ ಸತ್ಯನಾರಾಯಣ  ಭಟ್‌ರನ್ನು ಹೊರಗೆ ತೆಗೆದಿದ್ದಾರೆ. ಬಳಿಕ ಜೆಸಿಬಿ ಮೂಲಕ ವ್ಯಾನ್ ಮೇಲಕ್ಕೆತ್ತಲಾಯಿತು. ವ್ಯಾನ್ ಬಹುತೇಕ ಹಾನಿಗೀಡಾಗಿದೆ.  ಅಪಘಾತ ಮಾಹಿತಿ ತಿಳಿದು ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವೇಣುಗೋಪಾಲ್‌ರ ನೇತೃತ್ವದಲ್ಲಿ ಅಗ್ನಿಶಾಮಕದಳ ಹಾಗೂ ಪೊಲೀಸರು  ಸ್ಥಳಕ್ಕೆ ತಲುಪಿದ್ದರು.

You cannot copy contents of this page