ಬಸ್ ಪ್ರಯಾಣ ವೇಳೆ ಬಾಲಕಿಯ ದಿಟ್ಟಿಸಿ ನೋಡಿದ ಮಧ್ಯವಯಸ್ಕ: ಪೊಲೀಸರಿಗೆ ಹಸ್ತಾಂತರ

ಕುಂಬಳೆ: ತಾಯಿಯೊಂದಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ೧೪ರ ಹರೆಯದ ಬಾಲಕಿಯನ್ನು ದಿಟ್ಟಿಸಿ ನೋಡಿದ ಮಧ್ಯವಯಸ್ಕನನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು.  ಬಳಿಕ ಸಂಬಂಧಿಕರನ್ನು ಕರೆಸಿದ ಪೊಲೀಸರು ಆರೋಪಕ್ಕೆಡೆಯಾದ  ವ್ಯಕ್ತಿಗೆ ಚಿಕಿತ್ಸೆಗೊಳಪಡಿಸಲಾಯಿತು.

ಕುಂಬಳೆಯಿಂದ ಪೆರ್ಲಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ನಿನ್ನೆ ಈ ಘಟನೆ ನಡೆದಿದೆ. ಮಧ್ಯವಯ ಸ್ಕನಾದ ಪ್ರಯಾಣಿಕನ ಉಪಟಳ ಸಹಿಸಲಾಗದೆ ಬಾಲಕಿ ಬಸ್‌ನೊಳಗೆ ಬೊಬ್ಬಿಟ್ಟಿದ್ದಾಳೆ. ಈ ಹಿನ್ನೆಲೆಯಲ್ಲಿ ಬಸ್ ಸೀತಾಂಗೋಳಿಗೆ ತಲುಪಿದಾಗ ಪೊಲೀಸ್ ಸಹಾಯ ಕೇಂದ್ರದಲ್ಲಿ ವಿಷಯ ತಿಳಿಸಿ ಆರೋಪಕ್ಕೆಡೆಯಾದ ವ್ಯಕ್ತಿಯನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು. ಬಳಿಕ ಇನ್‌ಸ್ಪೆಕ್ಟರ್ ಇ. ಅನೂಪ್ ಸ್ಥಳಕ್ಕೆ ತಲುಪಿ ಮಧ್ಯವಯಸ್ಕನನ್ನು ಕಸ್ಟಡಿಗೆ ತೆಗೆಯಲಾಯಿತು. ಬಾಲಕಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದು, ವ್ಯಕ್ತಿ ತನ್ನನ್ನು ದಿಟ್ಟಿಸಿ ನೋಡಿದಾಗ ಭಯದಿಂದ ಬೊಬ್ಬಿಟ್ಟಿರುವುದಾಗಿ ಆಕೆ ತಿಳಿಸಿದ್ದಾಳೆ.

RELATED NEWS

You cannot copy contents of this page