ಬಾಂಜತ್ತಡ್ಕ ಶ್ರೀ ಸತ್ಯನಾರಾಯಣ ಭಜನಾಮಂದಿರದ ರಜತ ವಾರ್ಷಿಕೋತ್ಸವ 12ರಂದು


ಬದಿಯಡ್ಕ: ಬಾಂಜತ್ತಡ್ಕ ಶ್ರೀ ಸತ್ಯನಾರಾಯಣ ಭಜನಾಮಂದಿರದ 25ನೇ ವಾರ್ಷಿಕೋತ್ಸವ ಈ ತಿಂಗಳ 12ರಂದು ಜರಗಲಿದೆ. ಅಂದು ಬೆಳಿಗ್ಗೆ 8ಕ್ಕೆ ಗಣಪತಿ ಹೋಮ, ಭಜನೆ 9.30ರಿಂದ ಶ್ರೀ ಸತ್ಯನಾರಾಯಣ ಪೂಜೆ, 10ರಿಂದ ಯೋಗಾಚಾರ್ಯ ಶ್ರೀ ಪುಂಡರೀಕಾಕ್ಷ ಬೆಳ್ಳೂರು ಮತ್ತು ಬಳಗದವರಿಂದ ಹರಿಕಥೆ, ಮಧ್ಯಾಹ್ನ ಮಹಾಪೂಜೆ, ಅಪರಾಹ್ನ 2ರಿಂದ ವಿಷ್ಣು ಫ್ರೆಂಡ್ಸ್ ಬಾಂಜತ್ತಡ್ಕ ಇದರ ಪ್ರಾಯೋಜಕತ್ವದಲ್ಲಿ ಶ್ರೀ ಉದನೇಶ್ವರ ಭಜನಾ ಮಂಡಳಿ ಪೆರಡಾಲ ಇವರಿಂದ ಭಜನೆ, 4ಕ್ಕೆ ರಾಮ ಇಕ್ಕೇರಿ ಇವರಿಂದ ಭಾಗವತ ಪಾರಾಯಣ, 6 ಗಂಟೆಗೆ ವೃಂದಾವನ ಮಹಿಳಾ ಭಜನಾ ಸಂಘದವರಿAದ ಭಜನೆ, ರಾತ್ರಿ 8.30ಕ್ಕೆ ಮಹಾಪೂಜೆ, 9ಕ್ಕೆ ಎಸ್ಆರ್ಕೆ ನಾಟ್ಯಾಲಯ ಬಂಬ್ರಾಣ ಇವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.

RELATED NEWS

You cannot copy contents of this page