ಬಾಲಿವುಡ್ನ ಹಿರಿಯ ನಟ ಮನೋಜ್ ಕುಮಾರ್ ವಿಧಿವಶ


ಮುಂಬೈ: ದೇಶಭಕ್ತಿ ಚಲನಚಿತ್ರಗಳ ಮೂಲಕ ಖಾತಿ ಮತ್ತು ಭರತ್ ಕುಮಾರ್ ಎಂದೇ ವಿಶೇಷವಾಗಿ ಹೆಸರುವಾಸಿಯಾದ ಬಾಲಿವುಡ್ನ ಹಿರಿಯ ನಟ ಮತ್ತು ನಿರ್ದೇಶಕ ಮನೋಜ್ ಕುಮಾರ್ 87ನೇ ವಯಸ್ಸಿನಲ್ಲಿ ಮುಂಬೈಯ ಕೋಕಿಲಾ ಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು.
1937 ಜುಲೈ 24ರಂದು ಜನಿಸಿದ ಮನೋಜ್ ಕುಮಾರ್ರ ನಿಜವಾದ ಹೆಸರು ಹರಿಕೃಷ್ಣಗಿರಿ ಗೋಸ್ವಾಮಿ ಎಂದಾಗಿದೆ. ದೇಶಭಕ್ತಿ ಚಲನಚಿತ್ರಗಳು ಮತ್ತು ಭರತ್ ಕುಮಾರ್ ಎಂಬ ಅಡ್ಡ ಹೆಸರಿನಿಂದಲೇ ಅವರು ಹೆಸರುವಾಸಿ ಯಾಗಿದ್ದರು. ದೇಶಭಕ್ತಿ ಕಥಾವಸ್ತುವಿನ ಆಧಾರದಲ್ಲಿ ನಿರ್ಮಿಸಲಾದ ಶಹೀದ್, ಪೂರಬ್ ಔರ್ ಪಶ್ಚಿಮ್, ರೋಟಿ, ಕಪ್ಡಾ ಔರ್ ಮಕಾನ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯಾಗಿ 1992ರಲ್ಲಿ ಮನೋಜ್ ಕುಮಾರ್ಗೆ ಪದ್ಮಶ್ರೀ ಮತ್ತು 2015ರಲ್ಲಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರು ಹಲವು ಸಿನಿಮಾಗಳಲ್ಲಿ ನಿರ್ದೇಶಕರಾ ಗಿದ್ದರು. 1999ರಿಂದ ಅವರು ನಟನೆಯಿಂದ ನಿವೃತ್ತರಾಗಿದ್ದರು.

RELATED NEWS

You cannot copy contents of this page