ಬಾಳಿಯೂರು ಮುಹಿಯದ್ದೀನ್  ಜುಮಾ ಮಸೀದಿ ಉದ್ಘಾಟನೆ ೧೪ರಿಂದ

ಮೀಯಪದವು: ಬಾಳಿಯೂರು ಮುಹಿಯದ್ದೀನ್ ಜುಮಾ ಮಸೀದಿಯ ಉದ್ಘಾಟನೆ ಹಾಗೂ ಸೌಹಾರ್ದ ಸಂಗಮ, ಮೂರು ದಿನಗಳ ಧಾರ್ಮಿಕ ಪ್ರವಚನ ಈ ತಿಂಗಳ ೧೪ರಂದು ಆರಂಭಗೊಳ್ಳಲಿದೆ. ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಙಳ್ ಉದ್ಘಾಟಿಸು ವರು. ಕೆ.ಎಸ್. ಆಲಿ ತಂಙಳ್ ಕುಂಬೋಳ್ ಅಧ್ಯಕ್ಷತೆ ವಹಿಸುವರು. ಬದರ್ ಮೌಲೀದ್ ಪಾರಾಯಣಕ್ಕೆ ಕುರತ್ತು ಸಾರತ್ ಫಸಲ್ ಕೋಯಮ್ಮ ತಂಙಳ್ ನೇತೃತ್ವ ನೀಡುವರು. ಸೌಹಾರ್ದ ಸಂಗಮವನ್ನು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸುವರು. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕ ಎನ್.ಎ. ನೆಲ್ಲಿಕುನ್ನು, ಸದಾಶಿವ ಶೆಟ್ಟಿ ಕುಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

೧೫ರಂದು ಮಜ್ಲಿಸುನ್ನೂರ್‌ಗೆ ಇಬ್ರಾಹಿಂ ಬಾತಿಷ ತಂಙಳ್ ಆನೆಕಲ್ಲು ನೇತೃತ್ವ ನೀಡುವರು. ಬದ್ರುಸಾದಾತ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ಕಡಲುಂಡಿ ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ನೀಡುವರು.೧೬ರಂದು ಸೈನುಲ್ ಆಬಿದಿನ್ ತಂಙಳ್ ಕುನ್ನುಂಗೈ ಪ್ರಾರ್ಥನೆಗೆ ನೇತೃತ್ವ ನೀಡುವರು. ನೌಫಲ್ ಸಖಾಫಿ ಕಳಸ ಪ್ರವಚನ ನೀಡುವರು. ಈ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಸೀದಿ ಸಮಿತಿ ಪದಾಧಿಕಾರಿಗಳು ಭಾಗವಹಿಸಿದರು

RELATED NEWS

You cannot copy contents of this page