ಬಾವಿಗೆ ಬಿದ್ದ ಕೋಳಿಯನ್ನು ರಕ್ಷಿಸಲು ಇಳಿದ ಯುವಕ ಮೇಲಕ್ಕೇರುತ್ತಿದ್ದಾಗ ಬಿದ್ದು ಮೃತ್ಯು
ಮುಳ್ಳೇರಿಯ: ಬಾವಿಗೆ ಬಿದ್ದ ಕೋಳಿಯನ್ನು ರಕ್ಷಿಸಲೆಂದು ಇಳಿದ ಯುವಕ ಮೇಲಕ್ಕೇರುತ್ತಿದ್ದಾಗ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ನೆಟ್ಟಣಿಗೆಯಲ್ಲಿ ನಡೆದಿದೆ.
ನೆಟ್ಟಣಿಗೆ ಪಡೈಮೂಲೆ ನಿವಾಸಿ ಸುಂದರ ಎಂಬವರ ಪುತ್ರ ಸತೀಶ (30) ಮೃತಪಟ್ಟ ದುರ್ದೈವಿಯಾ ಗಿದ್ದಾರೆ. ನೆಟ್ಟಣಿಗೆ ಬಳಿಯ ಕಲ್ಲಗ ಎಂಬಲ್ಲಿನ ರವಿ ಎಂಬವರ ಬಾವಿಗೆ ನಿನ್ನೆ ಸಂಜೆ ಕೋಳಿ ಬಿದ್ದಿತ್ತು. ಅದನ್ನು ಮೇಲಕ್ಕೆತ್ತಲೆಂದು ಸತೀಶ ಹಗ್ಗ ಮೂಲಕ ಬಾವಿಗೆ ಇಳಿದಿದ್ದರು. ಬಳಿಕ ಮೇಲೇರುತ್ತಿದ್ದಂತೆ ಆಯತಪ್ಪಿ ಅವರು ಬಾವಿಗೆ ಬಿದ್ದಿದ್ದಾರೆ. ಕೂಡಲೇ ಕಾಸರಗೋಡಿನಿಂದ ತಲುಪಿದ ಅಗ್ನಿ ಶಾಮಕದಳ ಸತೀಶರನ್ನು ಮೇಲಕ್ಕೆ ತ್ತಿದ್ದು, ಆದರೆ ಜೀವ ರಕ್ಷಿಸಲಾಗಲಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಮೃತರು ತಾಯಿ ಸೀತ, ಪತ್ನಿ ಉಮಾವತಿ, ಮಕ್ಕಳಾದ ಶಾಂತ, ಶರಣ್ಯ ಸಹೋದರ-ಸಹೋದರಿಯರಾದ ಸಂಜೀವ, ಗೀತಾ, ವಿಜಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.