ಬಿಇಎಂ ಶಾಲೆಗೆ ನೂತನ ಬಸ್ ಕೊಡುಗೆ

ಕಾಸರಗೋಡು: ನಗರದ ಬಿಇಎಂ ಹೈಸ್ಕೂಲ್‌ಗೆ ಮೆನೇಜ್‌ಮೆಂಟ್, ಅಧ್ಯಾಪಕ,. ಸಿಬ್ಬಂದಿ ವರ್ಗದವರು ಕೊಡುಗೆಯಾಗಿ ನೀಡಿದ ಶಾಲಾ ಬಸ್‌ನ ಉದ್ಘಾಟನೆ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಮೆನೇಜರ್ ರೆವರೆಂಡ್ ಫಾ| ಸುನಿಲ್ ಪುದಿಯಾಟಿಲ್ ಉದ್ಘಾಟಿಸಿ ದರು. ಪ್ರಾಂಶುಪಾಲ ರಾಜೇಶ್ಚಂದ್ರ, ಮುಖ್ಯೋಪಾಧ್ಯಾಯ ಗಣೇಶ್ ಕೆ, ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞಸಮಿತಿಯ ಅಧ್ಯಕ್ಷ ವೆಂಕಟ್ರಮಣ ಹೊಳ್ಳ, ಪ್ರೇಮ್‌ಜಿತ್, ಪಿಟಿಎ ಸದಸ್ಯರು, ಯಶವಂತ ಮಾಸ್ತರ್, ಬಾಲ ಕೃಷ್ಣ, ಸಂಧ್ಯಾಕುಮಾರಿ, ಸಿಬ್ಬಂದಿವರ್ಗ, ಮಕ್ಕಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page