ಬಿಜೆಪಿ ಅಭ್ಯರ್ಥಿಯ ಪೋಸ್ಟರ್ ನಾಶ: ನಾಲ್ಕು ಮಂದಿ ಸಿಪಿಎಂ ಕಾರ್ಯಕರ್ತರ ವಿರುದ್ಧ ಕೇಸು

ಕಾಸರಗೋಡು:    ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಎಲ್. ಅಶ್ವಿನಿಯವರ ಚುನಾವಣಾ ಪ್ರಚಾರದಂಗವಾಗಿ  ಬೇಡಗಂನಲ್ಲಿ ಸ್ಥಾಪಿಸಲಾಗಿದ್ದ ಪೋಸ್ಟರ್‌ಗಳನ್ನು ನಾಶಗೊಳಿಸಲಾಗಿದೆ.  ಘಟನೆಗೆ ಸಂಬಂಧಿಸಿ ನಾಲ್ಕು ಮಂದಿ ಸಿಪಿಎಂ ಕಾರ್ಯಕರ್ತರ ವಿರುದ್ಧ ಬೇಡಗಂ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ.  ಕಳೆದ ದಿನ ಸಂಜೆ ಬೇಡಗಂ ವಲಿಯಪಾರ ಎಂಬಲ್ಲಿ  ಪೋಸ್ಟರ್ ಸ್ಥಾಪಿಸಲಾಗಿತ್ತು. ಅದನ್ನು   ರಾತ್ರಿಯಾಗು ವಷ್ಟರಲ್ಲಿ ನಾಶಪಡಿಸಲಾಗಿತ್ತು. ಘಟನೆಗೆ ಸಂಬಂಧಿಸಿ ಬೇಡಗಂ   ಬಿಜೆಪಿ ಪಂಚಾ ಯತ್ ಸಮಿತಿ  ಅಧ್ಯಕ್ಷ ಉದಯನ್ ಚೆಂಬಕ್ಕಾಡ್‌ರ  ದೂರಿನಂತೆ  ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

You cannot copy contents of this page