ಬಿಜೆಪಿ ಕೇರಳ ಪ್ರಭಾರಿಯಾಗಿ ಪ್ರಕಾಶ್ ಜಾವ್ದೇಕರ್ ಮುಂದುವರಿಕೆ

ಹೊಸದಿಲ್ಲಿ: ಬಿಜೆಪಿ ಕೇರಳ ಪ್ರಭಾರಿಯಾಗಿ ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವ್ದೇಕರ್ ಮುಂದುವರಿಯಲಿದ್ದಾರೆ. ಸಹಭಾರಿಯಾಗಿ ಭುವನೇಶ್ವರ ಲೋಕಸಭಾ ಸದಸ್ಯೆ, ಮಾಜಿ ಐಎಎಸ್ ಅಧಿಕಾರಿ ಅಪರಾಜಿತ್ ಸಾರಂಗಿ ಅವರನ್ನು ನೇಮಿಸಲಾಗಿದೆ. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಿಲ್ ಆಂಟನಿಯನ್ನು ಮೇಘಾಲಯ, ನಾಗಾಲ್ಯಾಂಡ್ ರಾಜ್ಯಗಳ ಪ್ರಭಾರಿಯಾಗಿ ನೇಮಿಸಲಾಗಿದೆ.

ಈಶಾನ್ಯ ರಾಜ್ಯಗಳ ಕೋಆರ್ಡಿನೇಟರ್ ಆಗಿ ಡಾ. ಸಂಪಿತ್ ಪಾತ್ರ, ಸಹ ಕೋಆರ್ಡಿನೇಟರ್ ಆಗಿ ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್‌ರನ್ನು ನೇಮಿಸಲಾಯಿತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ರಾಧಾಮೋಹನ್‌ದಾಸ್ ಅಗರ್ವಾಲ್‌ರನ್ನು ಕರ್ನಾಟಕ ರಾಜ್ಯದ ಪ್ರಭಾರಿಯಾಗಿ, ಸುಧಾಕರ ರೆಡ್ಡಿಯನ್ನು ಸಹ ಪ್ರಭಾರಿಯಾಗಿ ನೇಮಿಸಲಾಗಿದೆ.

You cannot copy contents of this page