ಪಾಟ್ನಾ: ಬಿಹಾರದಲ್ಲಿ ಮಾಧ್ಯಮ ಕಾರ್ಯಕರ್ತನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆಗೈದ ಘಟನೆ ನಡೆದಿದೆ.
ದೈನಿಕ್ ಜಾಗರಣ್ ಪತ್ರಿಕೆಯ ಪತ್ರಕರ್ತನಾದ ವಿಮಲ್ ಕುಮಾರ್ ಯಾದವ್ ಎಂಬವರು ಕೊಲೆಗೀ ಡಾದ ದುರ್ದೈವಿಯಾಗಿದ್ದಾರೆ. ರಾನಿಗಂಜ್ ಜಿಲ್ಲೆಯ ಅರಾರ ಎಂಬಲ್ಲಿರುವ ಮನೆಗೆ ನುಗ್ಗಿದ ದುಷ್ಕರ್ಮಿಗಳು ವಿಮಲ್ ಕುಮಾರ್‌ರ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡೇಟು ತಗಲಿ ಗಂಭೀರ ಗಾಯಗೊಂಡ ವಿಮಲ್ ಕುಮಾರ್ ತಕ್ಷಣ ಮೃತಪಟ್ಟಿದ್ದಾರೆ. ಬೈಕ್‌ಗಳಲ್ಲಿ ತಲುಪಿದ ನಾಲ್ಕು ಮಂದಿ ಆಕ್ರಮಣ ನಡೆಸಿ ತಕ್ಷಣ ಪರಾರಿಯಾಗಿದ್ದಾರೆನ್ನಲಾಗಿದೆ.