ಬಿಹಾರದಲ್ಲಿ ರೈಲು ಅಪಘಾತ:ನಾಲ್ಕು ಸಾವು, ಹಲವರಿಗೆ ಗಂಭೀರ; ಬುಡಮೇಲು ಕೃತ್ಯ ಶಂಕೆ
ಪಾಟ್ನಾ: ನವದೆಹಲಿಯ ಆನಂದ್ ವಿಹಾರ್ ಟರ್ಮಿನಲ್‌ನಿಂದ ಕಾಮಾಖ್ಯಕ್ಕೆ ತೆರಳುತ್ತಿದ್ದ ನೋರ್ತ್ ಈಸ್ಟ್ ಎಕ್ಸ್‌ಪ್ರೆಸ್ ರೈಲು ನಿನ್ನೆ ರಾತ್ರಿ ೧೦ ಗಂಟೆ ಸುಮಾರಿಗೆ ಅಪಘಾತಕ್ಕೀ ಡಾಗಿದೆ. ಇದು ಒಂದು ಬುಡಮೇಲು ಕೃತ್ಯವಾಗಿದೆಯೆಂಬ ಶಂಕೆಯೂ ಜತೆಗೆ ಉಂಟಾಗಿದೆ.
ಈ ಅಪಘಾತದಲ್ಲಿ ನಾಲ್ವರು ಪ್ರಯಾಣಿಕರು ಅಸುನೀಗಿದ್ದು, ಹಲವರು ಗಾಯಗೊಂಡಿದ್ದಾರೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿ ದೆಯೆಂದು ವೈದ್ಯರು ತಿಳಿಸಿದ್ದಾರೆ.
ಬಕ್ಸರ್ ಜಂಕ್ಷನ್‌ನಿಂದ ಹೊರಟ ಕೆಲ ಹೊತ್ತಿನಲ್ಲೇ ರಘುನಾಥಪುರ ರೈಲು ನಿಲ್ದಾಣದ ಪೂರ್ವಿ ಗುಮ್ಚಿ ಬಳಿ ನೋರ್ತ್ ಈಸ್ಟ್ ಎಕ್ಸ್‌ಪ್ರೆಸ್‌ನ ೨೧ ಬೋಗಿಗಳು ಹಳಿ ತಪ್ಪಿದ್ದು, ಈ ಪೈಕಿ ಎgಡು ಬೋಗಿಗಳು ಪಲ್ಟಿಯಾಗಿದೆ. ಅಪ ಘಾತ ನಡೆದ ಕೂಡಲೇ ಬ್ರಹ್ಮಪುರ ಪೊಲೀಸರು, ಅಗ್ನಿಶಾಮಕದಳ ಮತ್ತು ರೈಲ್ವೇ ಇಲಾಖೆಯ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಆಸ್ಪ ತ್ರೆಗೆ ಸಾಗಿಸಲಾಗಿದೆ. ಅಪಘಾತಕ್ಕೀ ಡಾದ ರೈಲು ೧೧೦ರಿಂದ ೧೨೦ ಕಿ.ಮೀ. ವೇಗದಲ್ಲಿ ಚಲಿಸುತ್ತಿತ್ತು. ರಘುನಾಥಪುರ ರೈಲು ನಿಲ್ದಾಣ ಬಳಿ ಪಾಯಿಂಟ್ ಬದಲಾಯಿಸುವ ವೇಳೆ ಬಲವಾದ ಆಘಾತದೊಂದಿಗೆ ರೈಲು ಅಪಘಾತಕ್ಕೀಡಾಗಿದೆ.