ಬೃಹತ್ ಪ್ರಮಾಣದ ಗೋವಾ ನಿರ್ಮಿತ ಮದ್ಯ ವಶ: ಇಬ್ಬರ ವಿರುದ್ಧ ಕೇಸು; ಯುವತಿ ಸೆರೆ
ಕಾಸರಗೋಡು: ತೆಕ್ಕಿಲ್ ಗ್ರಾಮದ ಚರುಗರದಲ್ಲಿ ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟೀ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ (ಗ್ರೇಡ್) ಸಿ.ಕೆ. ವಿ. ಸುರೇಶ್‌ರ ನೇತೃತ್ವದ ತಂಡ ಮೊನ್ನೆ ರಾತ್ರಿ ವೇಳೆ ನಡೆಸಿದ ಕಾರ್ಯಾಚರಣೆಯಲ್ಲಿ 175.68 ಲೀಟರ್ ಗೋವಾ ಮದ್ಯ ಪತ್ತೆ ಹಚ್ಚಿ ವಶಪಡಿಸಿದೆ. ಇದನ್ನು ೨೦ ಕಾರ್ಡ್‌ಬೋರ್ಡ್ ಪೆಟ್ಟಿಗೆಗಳಲ್ಲಿ ಬಚ್ಚಿಡಲಾಗಿತ್ತು.
ಇದಕ್ಕೆ ಸಂಬಂಧಿಸಿ ತೆಕ್ಕಿಲ್ ಪರಂಬ ಚರುಗರದ ವಳ್ಳಿಪ್ಲಾಕಲ್ ವೀಟಿಲ್‌ನ ವಿನಿತ (36) ಮತ್ತು ಪೆರಿಯಾ ನಾಲೇಕರ ನಿವಾಸಿ ವಿನೋದ್ ಕುಮಾರ್ ಎನ್. ಎಂಬಿಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ ವಿನಿತಾಳನ್ನು ಬಂಧಿಸಲಾಗಿದ್ದು, ವಿನೋದ್ ಕುಮಾರ್‌ನ ಪತ್ತೆಗಾಗಿ ರುವ ಶೋಧ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಒಂದನೇ ಆರೋಪಿಯಾಗಿರುವ ವಿನೋದ್ ಕುಮಾರ್ ಮಂಜೇಶ್ವರ ಅಬಕಾರಿ ತಪಾಸಣಾ ಕೇಂದ್ರದಲ್ಲಿ ಇತ್ತೀಚೆಗೆ ಪತ್ತೆಹಚ್ಚಲಾದ 2484 ಲೀಟರ್ ಗೋವಾ ಮದ್ಯ ಪ್ರಕರಣದಲ್ಲೂ ಆರೋಪಿಯಾಗಿರುವುದಾಗಿ ಅಧಿಕಾರಿ ಗಳು ತಿಳಿಸಿದ್ದಾರೆ. ವಶಪಡಿಸಲಾದ ಮಾಲನ್ನು ಬಳಿಕ ಕಾಸರಗೋಡು ರೇಂಜ್ ಎಕ್ಸೈಸ್ ಕಚೇರಿಗೆ ಹಸ್ತಾಂತರಿಸಲಾಗಿದೆ.
ಗ್ರೇಡ್ ಪ್ರಿವೆಂಟಿವ್ ಆಫೀಸರ್ ಗಳಾದ ನೌಶಾದ್ ಕೆ, ಪ್ರಜಿತ್ ಕೆ.ಆರ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಸೋನು ಸೆಬಾಸ್ಟಿಯನ್, ಅತುಲ್ ಟಿ.ವಿ., ರೀನ ವಿ. ಮತ್ತು ಧನ್ಯ ಟಿ.ವಿ. ಎಂಬಿವರು ಈ ಅಬಕಾರಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.