ಬೆಂಗಳೂರಿನಲ್ಲಿ ಕಟ್ಟಡದ ಮೇಲಿಂದ ಬಿದ್ದು ವಯನಾಡ್‌ನ ವಿದ್ಯಾರ್ಥಿನಿ ಮೃತ್ಯು

ಬೆಂಗಳೂರು: ವಯನಾಡ್ ನಿವಾಸಿಯಾದ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಕಟ್ಟಡದ ಮೇಲಿನಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ವಯನಾಡ್ ಮಾನಂತವಾಡಿ ವೆಳ್ಳಮುಂಡ ಮಲಂಬುರ ಎಂಬಲ್ಲಿನ ಚಾಕೋ ಎಂಬವರ ಪುತ್ರಿ ಲಿಸಾ (20) ಮೃತಪಟ್ಟ ದುರ್ದೈವಿ. ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿನಿ ಮೊನ್ನೆ ಸಂಜೆ ಕಟ್ಟಡದ ಮೂರನೇ ಅಂತಸ್ತಿ ನಿಂದ ಬಿದ್ದಿದ್ದಳು. ಕೂಡಲೇ ಆಸ್ಪತ್ರೆ ಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿ ದರೂ ಜೀವ ರಕ್ಷಿಸಲಾಗಲಿಲ್ಲ.

ಲಿಸಾ ಮಾನಂತವಾಡಿ ಮಲಬಾರ್ ಇನ್‌ಸ್ಟಿಟ್ಯೂಟ್ ನಲ್ಲಿ ಬಿಬಿಎ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಾಳೆ. ಇಂಟರ್ನ್‌ಶಿಪ್‌ಗಾಗಿ ಒಂದು  ತಿಂಗಳ ಹಿಂದೆ ಬೆಂಗಳೂರಿಗೆ ತೆರಳಿದ್ದಳು. ಮೃತಳು ತಾಯಿ ಲಿಲ್ಲಿ, ಸಹೋದರಿ ಲಿನ್ಸಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ.

RELATED NEWS

You cannot copy contents of this page