ಬೇಪೂರು ಆಳ ಸಮುದ್ರದಲ್ಲಿ ಬೆಂಕಿ ತಗಲಿದ ಹಡಗಿನಲ್ಲಿ ಮಾರಕ ವಿಷ ಪದಾರ್ಥಗಳು: ಕರಾವಳಿಯಲ್ಲಿ ಭಾರೀ ಆತಂಕ ಸೃಷ್ಟಿ, ಈಗಲೂ ಹೊತ್ತಿ ಉರಿಯುತ್ತಿರುವ ಹಡಗು
ಕಲ್ಲಿಕೋಟೆ: ಇಲ್ಲಿಗೆ ಸಮೀಪದ ಬೇಪೂರು ಸಮುದ್ರ ತೀರದಿಂದ 88 ನೋಟಿಕಲ್ ಮೈಲು ದೂರದ ಆಳ ಸಮುದ್ರದಲ್ಲಿ ಬೆಂಕಿ ಅವಘಡಕ್ಕೊಳಗಾದ ಶ್ರೀಲಂಕಾದ ಕೊಲಂಬೋದಿAದ ಮುಂಬೈಗೆ ಹೋಗುತ್ತಿದ್ದ ಸಿಂಗಾಪುರ್ ನೋಂದಾಯಿತ ಸರಕು ಹಡಗಿನಲ್ಲಿರುವ ಕಂಟೈನರ್ಗಳಲ್ಲಿ ಭಾರೀ ಮಾದಕ ವಿಷ ದ್ರವ್ಯಗಳು ಒಳಗೊಂಡಿದ್ದು, ಅದು ಕೇರಳದ ಕರಾವಳಿ ಪ್ರದೇಶಗಳಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಈ ಸರಕು ಹಡಗಿನಲ್ಲಿ ಸುಮಾರು 650 ಕಂಟೈನರ್ಗಳಿದ್ದು, ಇಂಟರ್ ನೇಶನಲ್ ಮ್ಯಾರಿಟೈಂ ಆರ್ಗನೈಸೇಶನ್ನ ಮಾರ್ಗಸೂಚಿ ಪ್ರಕಾರ ಕ್ಲಾಸ್ 6.1ರಲ್ಲಿ ಒಳಪಡುವ ಭಾರೀ ವಿಷಕಾರಿ ಕೀಟನಾಶಗಳು ಈ ಕಂಟೈನರ್ಗಳಲ್ಲಿವೆ. 20 ಕಂಟೈನರ್ಗಳಲ್ಲಿ 1.83 ಲಕ್ಷ ಕಿಲೋ ಬೈಪರಿ ಡಿಲಿಯಮ್ ಎಂಬ ಕೀಟನಾಶಕವಿದೆ. ಇನ್ನೊಂದು ಕಂಟೈನರ್ನಲ್ಲಿ 27,786 ಕಿಲೋ ಇಥೈನಲ್ ಕ್ಲೋರೋ ಫಾರ್ಮೆಟ್ ಎಂಬ ಹೆಸರಿನ ಕೀಟ ನಾಶಕವಿದೆ. ಇದು ಮಾತ್ರವಲ್ಲದೆ ಇತರ ಹಲವು ಕೀಟನಾಶಗಳೂ ಹಲವು ಕಂಟೈನರ್ಗಳಲ್ಲಿ ಒಳಗೊಂಡಿವೆ. ಪರಿಸರಕ್ಕೆ ಭಾರೀ ಬೆದರಿಕೆಯೊಡ್ಡುವ 167 ಪೆಟ್ಟಿಗೆ ಲಿಥಿಯಂ ಬ್ಯಾಟರಿಗಳು ಮತ್ತಿತರ ಸಾಮಗ್ರಿಗಳೂ ಇವೆ. ಇದು ಮಾತ್ರವಲ್ಲದೆ ದಿಢೀರ್ ಆಗಿ ಬೆಂಕಿ ತಗಲುವ ದ್ರಾವಕಗಳು ಒಳಗೊಂ ಡಿರುವ 40 ಕಂಟೈನರ್ಗಳು, ಘನವಸ್ತುಗಳು ಒಳಗೊಂಡಿರುವ 19 ಕಂಟೈನರ್ಗಳು, ವಾಯುಸಂಪರ್ಕದಿAದ ಬೆಂಕಿ ತಗಲುವ 4910 ಕಿಲೋಗ್ರಾಂ ರಾಸಾಯನಿಕ ವಸ್ತುಗಳೂ ಇದರಲ್ಲಿವೆ. ಇದು ಭಾರೀ ಆತಂಕಕ್ಕೂ ದಾರಿ ಮಾಡಿಕೊಟ್ಟಿದೆ.
ಈ ಸರಕು ಹಡಗು ಇನ್ನೂ ಉರಿಯುತ್ತಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾ ಪಡೆ, ಕೋಸ್ಟ್ ಗಾರ್ಡ್ ಪಡೆಗಳು ಅವಿರತ ಯತ್ನ ಇನ್ನೂ ಮುಂದುವರಿ ಸಿದ್ದು, ಬೆಂಕಿಯನ್ನು ಪೂರ್ಣವಾಗಿ ನಂದಿಸಲು ಸಾಧ್ಯವಾಗಿಲ್ಲ. ಇದು ಅತ್ಯಂತ ತ್ರಾಸದಾಯಕ ಹಾಗೂ ಸವಾಲಿನ ಕೆಲಸವಾಗಿದೆಯೆಂದು ಸಂಬAಧಪಟ್ಟವರು ತಿಳಿಸಿದ್ದಾರೆ.
ನಿನ್ನೆ ಬೆಳಿಗ್ಗೆ ಈ ಹಡಗು ಬೇಪೂರಿನ ಆಳ ಸಮುದ್ರ ಮೂಲಕ ಸಾಗುತ್ತಿದ್ದ ವೇಳೆ ಅದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಆ ಹಡಗಿನಲ್ಲಿ ಚೀನಾ, ಮ್ಯಾನ್ಮಾರ್, ಥಾಯ್ಲೆಂಡ್ ಮತ್ತು ಇಂಡೋ ನೇಶ್ಯಾದ 22 ಸಿಬ್ಬಂದಿಗಳಿದ್ದರು. ಬೆಂಕಿ ತಗಲಿದಾಕ್ಷಣ ಅವರೆಲ್ಲರೂ ಸಮುದ್ರಕ್ಕೆ ಹಾರಿದ್ದಾರೆ. ಇದರಲ್ಲಿ 18 ಮಂದಿಯನ್ನು ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ನಡೆಸಿದ ಕಾರ್ಯಾಚರಣೆ ಯಲ್ಲಿ ರಕ್ಷಿಸಿದ್ದು ಬಳಿಕ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾ ಗಿದೆ. ಸಮುದ್ರಕ್ಕೆ ಹಾರಿದವರ ಪೈಕಿ ನಾಲ್ವರು ನಾಪತ್ತೆಯಾಗಿದ್ದು, ಅವರಿಗಾ ಗಿರುವ ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾದ ಸಿಬ್ಬಂದಿಗಳ ಪೈಕಿ ಮೂವರ ಸ್ಥಿತಿ ಚಿಂತಾಜನಕ ವಾಗಿದೆಯೆಂದು ತಿಳಿಯಲಾಗಿದೆ. ಜೂನ್ 7ರಂದು ಕೊಲಂಬೋದಿAದ ಹೊರಟ ಸಿಂಗಾಪುರದ ಈ ಕಂಟೈನರ್ ಸರಕು ಹಡಗು ಜೂನ್ 10ಕ್ಕೆ ಮುಂಬೈಗೆ ತಲುಪಬೇಕಾಗಿತ್ತು. ದಾರಿ ಮಧ್ಯೆ ನಿನ್ನೆ ಬೆಳಿಗ್ಗೆ 10.30ಕ್ಕೆ ಬೇಪೂರಿನ ಆಳ ಸಮುದ್ರದಲ್ಲಿ ಅದಕ್ಕೆ ಬೆಂಕಿ ತಗಲಿದೆ.