ಕಾಸರಗೋಡು: ಬೈಕ್‌ಗಳನ್ನು ಕದ್ದು ಅವುಗಳ ಬಿಡಿಭಾಗಗಳನ್ನು ಮಾರಾಟ ಮಾಡುವ ಪ್ರಕರಣದ ಆರೋಪಿ ಕಾಸರಗೋಡು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ತೃಶೂರು ನಿವಾಸಿಯಾಗಿದ್ದಾನೆ. ಆರು ತಿಂಗಳ ಹಿಂದೆ ಕಾಸರಗೋಡು ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದಿಂದ ಬೈಕ್ ಕದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈತನನ್ನು ಸೆರೆಹಿಡಿದಿದ್ದಾರೆ.