ಬೈಕ್ ಢಿಕ್ಕಿ ಹೊಡೆದು ಪಾದಚಾರಿ ಮೃತ್ಯು

ಕಾಸರಗೋಡು: ಬೈಕ್ ಢಿಕ್ಕಿ ಹೊಡೆದು ಪಾದಚಾರಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಬೇಕಲ ಶ್ರೀ ಕುರುಂಬಾ ಭಗವತೀ ಕ್ಷೇತ್ರದ ಸ್ಥಾನಿಕ (ಕಡವನ್) ಬೇಕಲ ವಿಷ್ಣುಮಠದ ಯಜಮಾನ್ ನಗರದ ಕುಂಞಿರಾಮನ್ ಕಡವನ್ (೬೫) ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ಸಂಜೆ  ಬೇಕಲ ಚಿರಮ್ಮಲ್ ಸರಕಾರಿ ಶಾಲೆ  ಬಳಿಯ ರಾಜ್ಯ ಹೆದ್ದಾರಿ ಮೂಲಕ ನಡೆದುಕೊಂಡು ಹೋಗುತ್ತಿದ್ದ ವೇಳೆ   ಆ ದಾರಿಯಾಗಿ ಬಂದ ಬುಲ್ಲೆಟ್ ಬೈಕ್ ಅವರಿಗೆ ಢಿಕ್ಕಿ ಹೊಡೆದಿದೆ. ಗಂಭೀರಗಾಯಗೊಂಡ ಅವರನ್ನು  ಉದುಮದ ಆಸ್ಪತ್ರೆಗೆ ಸಾಗಿಸಿ  ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ನಂತರ ಕಾಸರಗೋಡಿನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಮೃತಪಟ್ಟರು.

RELATED NEWS

You cannot copy contents of this page