ಭಾರತ ವಿರೋಧಿ ಪ್ರಚಾರಗಳನ್ನು ಹತ್ತಿಕ್ಕಲು ರಾಜ್ಯಗಳಿಗೆ ಕೇಂದ್ರ ನಿರ್ದೇಶ

ನವದೆಹಲಿ: ಆಪರೇಶನ್ ಸಿಂಧೂರ್ ನಂತರ ಸಾಮಾಜಿಕ ಮತ್ತು ಡಿಜಿಟಲ್ ಪ್ಲಾಟ್ ಫಾಂಗಳಲ್ಲಿ ರಾಷ್ಟ್ರವಿರೋಧಿ ಪ್ರಚಾರದ ಕಣ್ಗಾವಲು ತೀವ್ರಗೊಳಿಸುವ ಮತ್ತು  ತಪ್ಪು ಮಾಹಿತಿ ಹರಡುವಿಕೆಯ ವಿರುದ್ಧ ತ್ವರಿತ ಕ್ರಮಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ನಿರ್ದೇಶ ನೀಡಿದೆ. ಗಡಿಯುದ್ಧಕ್ಕೂ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ಕ್ಷಿಪಣಿ ದಾಳಿ ನಡೆಸಿದ   ನಂತರ ಪಾಕಿಸ್ತಾನವು ವ್ಯಾಪಕವಾದ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದು, ಆ ಹಿನ್ನೆಲೆಯಲ್ಲಿ  ಹಾಗೂ  ಆಂತರಿಕವಾಗಿ ಹರಡಲಾಗುತ್ತಿರುವ ನಕಲಿ ಸುದ್ಧಿಗಳ ಹಾಗೂ ನಿರೂಪಣೆಗಳು ದೇಶದ ಭದ್ರತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಅಂತಹ ಪ್ರಚಾರ ನಡೆಸುವವರ ವಿರುದ್ಧ  ಮಾಹಿತಿ ತಂತ್ರಜ್ಞಾನ ಕಾಯ್ದೆ ೨೦೦೦ರ ಸೆಕ್ಷನ್ ೬೦ ಎ ಅಡಿಯಲ್ಲಿ ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ  ರಾಜ್ಯಗಳಿಗೆ ನೀಡಲಾದ ನಿರ್ದೇಶದಲ್ಲಿ  ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page