ಭೂ ಕುಸಿತ: ನಾಪತ್ತೆಯಾದ ಕಲ್ಲಿಕೋಟೆ ನಿವಾಸಿಗಾಗಿ ಶೋಧ ಮುಂದುವರಿಕೆ

ಕಲ್ಲಿಕೋಟೆ: ಕರ್ನಾಟಕದ ಶಿರೂರಿನ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡೆ ಕುಸಿದ ಪರಿಣಾಮ ಲಾರಿ ಸಹಿತ ನಾಪತ್ತೆಯಾದ ಕಲ್ಲಿಕೋಟೆ ನಿವಾಸಿ ಅರ್ಜುನ್ ಎಂಬವರಿಗಾಗಿ ಶೋಧ ಮುಂದುವರಿದಿದೆ. ಭೂಕುಸಿತ ಉಂಟಾದ ಪ್ರದೇಶಕ್ಕೆ ಮಂಗಳೂರಿ ನಿಂದ ತಲುಪಿದ ರಾಡಾರ್‌ನ ಸಹಾಯದಿಂದ ಇದೀಗ ಪರಿಶೀಲನೆ ನಡೆಸಲಾಗುತ್ತಿದೆ.  ಸುರತ್ಕಲ್‌ನ ಎನ್‌ಐಟಿಕೆ ತಂಡ ಭೂಕುಸಿv ವುಂಟಾದ ಸ್ಥಳ ಹಾಗೂ ಸಮೀಪದ ಹೊಳೆಯಲ್ಲಿ ಶೋಧ ನಡೆಸುತ್ತಿದೆ. ನಾಲ್ಕು ದಿನಗಳ ಹಿಂದೆ  ಶಿರೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಸಮೀಪದ ಗುಡ್ಡೆ ಕುಸಿದು ಭಾರೀ ಪ್ರಮಾಣದ ಮಣ್ಣು ತುಂಬಿಕೊಂಡಿದೆ. ಈ ವೇಳೆ ಅರ್ಜುನ್ ಚಲಾಯಿಸುತ್ತಿದ್ದ ಲಾರಿ ಮಣ್ಣಿನಡಿ ಸಿಲುಕಿಕೊಂಡಿದೆಯೆಂದು ಹೇಳಲಾಗುತ್ತಿದೆ.

You cannot copy contents of this page