ನವದೆಹಲಿ: ಮಣಿಪುರದಲ್ಲಿ ಇಂದು ಮುಂಜಾನೆ 2 ಗಂಟೆಗಳ ಅಂತರದಲ್ಲಿ ಭೂಕಂಪನ ಉಂಟಾಗಿದೆ. ಭೂ ವಿಜ್ಞಾನ ಸಚಿವಾಲಯದ ರಾಷ್ಟ್ರೀಯ ಭೂಕಂಪ ಕೇಂದ್ರದ ಎಕ್ಸ್‌ಪೋಸ್‌ನಲ್ಲಿ ಈ ವರದಿ ಮಾಡಲಾಗಿದೆ. ಮೊದಲ ಭೂಕಂಪವು ಇಂದು ಮುಂಜಾನೆ 1.54ರ ಸುಮಾರಿಗೆ 5.2 ತೀವ್ರತೆಯಲ್ಲಿ ನಡೆದಿದೆ. ಎರಡನೇ ಭೂಕಂಪವು ಮುಂಜಾನೆ 2.26ರ ವೇಳೆಗೆ ನಡೆದಿದೆ. ಇದರ ತೀವ್ರತೆ 2.5ರಷ್ಟಿತ್ತು.
ಮೊದಲ ಭೂಕಂಪದ ಕೇಂದ್ರ ಬಿಂದು ಮಣಿಪುರದ ಚುರಾಚಂಪುರ ಮತ್ತು ಎರಡನೇ ಭೂಕಂಪದ ಕೇಂದ್ರ ಬಿಂದು ನೋನಿ ಜಿಲ್ಲೆಯಲ್ಲಿ ಆಗಿದೆ ಎಂದು ಇಲಾಖೆ ತಿಳಿಸಿದೆ.