ಮಣಿಪುರ ಸಿಆರ್‌ಪಿಎಫ್ ಶಿಬಿರದಲ್ಲಿ ಗುಂಡಿಗೆ ಇಬ್ಬರು ಬಲಿ: ಸೈನಿಕ ಆತ್ಮಹತ್ಯೆ
ಇಂಫಾಲ್: ಮಣಿಪುರ್‌ನಲ್ಲಿ ಸಿಆರ್‌ಪಿಎಫ್ ಕ್ಯಾಂಪ್‌ನಲ್ಲಿ ಗುಂಡಿನ ಚಕಮಕಿ ನಡೆದಿದೆ. ಎರಡು ಸಹೋದ್ಯೋಗಿಗಳನ್ನು ಕೊಂದು ಸೈನಿಕ ಆತ್ಮಹತ್ಯೆ ನಡೆಸಿದ್ದಾನೆ. ೮ ಮಂದಿ ಗಾಯಗೊಂಡಿದ್ದಾರೆ. ಗಾಯಾಳು ಗಳನ್ನು ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ಹವೀಲ್ದಾರ್ ಸಂಜಯ್ ಕುಮಾರ್ ತನ್ನ ಸರ್ವೀಸ್ ರಿವಾಲ್ವರ್ ಉಪಯೋಗಿಸಿ ಸಬ್ ಇನ್ಸ್‌ಪೆಕ್ಟರ್ ಗೂ, ಕಾನ್‌ಸ್ಟೇಬಲ್‌ಗೂ ಗುಂಡು ಹಾರಿಸಿದ್ದಾನೆ. ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಸಂಜಯ್ ಕುಮಾರ್ ಸ್ವಯಂ ಗುಂಡು ಹಾರಿಸಿ ಕೊಂಡು ಆತ್ಮಹತ್ಯೆಗೈದಿದ್ದಾನೆ. ಎಫ್-120 ಸಿಒವೈ ಸಿಆರ್ ಪಿಎಫ್‌ನ ಅಧಿಕಾರಿಗಳಾಗಿದ್ದಾರೆ ಇವರು. ವೈಯಕ್ತಿಕ ಕಾರಣಗಳಿಂದ ಆಕ್ರಮಣ ನಡೆಸಿರಬೇಕೆಂದು ಪ್ರಾಥಮಿಕವಾಗಿ ತಿಳಿಯಲಾಗಿದೆ. ಘಟನೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಿನ್ನೆ ರಾತ್ರಿ 8 ಗಂಟೆಗೆ ಘಟನೆ ನಡೆದಿದೆ. ಆಕ್ರಮಣಕ್ಕೆ ಕಾರಣವೇನೆಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.