ಕಾಸರಗೋಡು: ರಾಜ್ಯದಲ್ಲಿ ಚಿನ್ನದ ದರ ಮತ್ತೊಮ್ಮೆ ದಾಖಲೆ ಸೃಷ್ಟಿಸಿದೆ. ಇಂದು ಒಂದು ಗ್ರಾಂ ಚಿನ್ನದ ದರ ೫೮೪೫ ರೂ. ಆಗಿದ್ದು, ಈ ಮೂಲಕ ಪವನ್‌ಗೆ ೪೬,೭೬೦ ರೂ.ಗೇರಿದೆ. ನವಂಬರ್ ೨೯ರಂದು ಒಂದು ಪವನ್ ಚಿನ್ನಕ್ಕೆ ೪೬,೪೮೦ ರೂ. ಆಗಿತ್ತು. ೩೦ರಂದು ಅದು ೪೬,೦೦೦ರೂ.ಗೆ ಇಳಿದಿತ್ತು. ನಿನ್ನೆ ೪೬,೧೬೦ ರೂ.ಆಗಿದ್ದರೆ ಇಂದು ಅದರಲ್ಲಿ ೬೦೦ ರೂ.ಗಳ ಹೆಚ್ಚಳವಾಗಿದೆ.