ಮದ್ಯದಮಲಿನಲ್ಲಿ ಬಸ್‌ನೊಳಗೆ ಗಲಾಟೆ ಸೃಷ್ಟಿಸಿದ ವ್ಯಕ್ತಿ ಸೆರೆ

ಕುಂಬಳೆ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ  ವ್ಯಕ್ತಿಯೋರ್ವ ಮದ್ಯದಮಲಿನಲ್ಲಿ ಗಲಾಟೆ ಸೃಷ್ಟಿಸಿ ಇತರ ಪ್ರಯಾಣಿಕರಿಗೆ ಸಮಸ್ಯೆ ಉಂಟುಮಾಡಿದ ಘಟನೆ ನಡೆದಿದೆ.  ಈ ಸಂಬಂಧ ಕಾಞಂಗಾಡ್ ನಿವಾಸಿ ಉಮರುಲ್ ಫಾರೂಕ್ (45) ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಈತ ನಿನ್ನೆ ಸಂಜೆ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದನು. ಮಂಗಳೂರಿ ನಿಂದ ಈತ ಬಸ್ ಹತ್ತಿದ್ದು ಆವಾಗಲೇ ಮದ್ಯದಮಲಿನಲ್ಲಿದ್ದನೆನ್ನಲಾಗಿದೆ. ಬಸ್ ಪ್ರಯಾಣ ಆರಂಭಿಸಿದೊಡನೆ ಈತ ಬಸ್‌ನೊಳಗೆ ಗಲಾಟೆಯೆಬ್ಬಿಸಿ ಇತರ ಪ್ರಯಾಣಿಕರಿಗೆ ಸಮಸ್ಯೆ ಸೃಷ್ಟಿಸಿದ್ದಾನ. ಇದರಿಂದ ಬಸ್ ಕುಂಬಳೆಗೆ ತಲುಪಿದಾಗ ನೇರವಾಗಿ ಪೊಲೀಸ್ ಠಾಣೆಗೆ ತಲುಪಿಸಿ ದೂರು ನೀಡಲಾಯಿತು. ಇದರಂತೆ ಪೊಲೀ ಸರು ಉಮರುಲ್ ಫಾರೂಕ್‌ನನ್ನು ಬಂಧಿಸಿ ಕೇಸು ದಾಖಲಿಸಿದ್ದಾರೆ. ಬಳಿಕ ಆತನ ಸ್ನೇಹಿತರನ್ನು ಠಾಣೆಗೆ ಕರೆಸಿ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.

You cannot copy contents of this page